Karnataka : 2022ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿದ್ದ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಇಲಾಖೆಯು (Karnataka Police Force Post) ತಾತ್ಕಾಲಿಕವಾಗಿ ಆಯ್ಕೆಪಟ್ಟಿ
ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ವಿವಿಧ ಮೂರು ಪಡೆಯ ರೀತಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ (Karnataka Police Force Post) ಬಿಡುಗಡೆ ಮಾಡಿದೆ.

ಪೊಲೀಸ್ ಪಡೆಯ ಎಸ್.ಐ ಹುದ್ದೆಗೆ ತಾತ್ಕಾಲಿಕ ಪಟ್ಟಿ ಈ ರೀತಿಯಾಗಿದ್ದು:
- 2021ರ ಡಿಸೆಂಬರ್ ನಲ್ಲಿ ಸಶಸ್ತ್ರ ಮೀಸಲು ಸಬ್ ಇನ್ಸ್ಪೆಕ್ಟರ್ (ಪುರುಷ) ಈ ಹುದ್ದೆಗಳಿಗೆ 2023ರ ಜನವರಿ 8ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.
- 2022ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ 63 ಹುದ್ದೆಗಳಿಗೆ ಅಧಿಸೂಚಿಸಲಾಗಿತ್ತು.
ಮತ್ತು ಜನವರಿ 29, 2023 ರಂದು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿತ್ತು. ಈಗ ಅದರ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : https://vijayatimes.com/khushbu-old-tweet-controversy/
3. 2021ರ ಡಿಸೆಂಬರ್ ತಿಂಗಳಲ್ಲಿ ವಿಶೇಷ ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ ಹಾಗೂ ಟ್ರಾನ್ಸ್ ಜೆಂಡರ್) ಸೇವಾನಿರತ ಮತ್ತು ಕಲ್ಯಾಣ ಕರ್ನಾಟಕದ 70ಹುದ್ದೆಗಳಿಗೆ ಅಧಿಸೂಚನೆ ನೀಡಲಾಗಿತ್ತು.
2022ರ ಡಿಸೆಂಬರ್ 18ರಂದು ಸದರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು.
ಕರ್ನಾಟಕ ಪೋಲಿಸ್ ಇಲಾಖೆ ಬಿಡುಗಡೆ ಮಾಡಿರುವಂತಹ ಎಲ್ಲಾ ತರಹದ ತಾತ್ಕಾಲಿಕ ಆಯ್ಕೆ ಪಟ್ಟಿಗಳ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಈ ಎಲ್ಲಾ ಮಾಹಿತಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು
http:sssi21.ksp-recruitment.in/ ವೆಬ್ಸೈಟ್ ಗೆ ಲಾಗಿನ್ ಮಾಡಿ.