ರಾಜ್ಯ ಬಜೆಟ್ ನಲ್ಲಿ ಮಹಿಳಾ ಉದ್ಯಮಿಗಳಿಗೆ 10 ಲಕ್ಷ ಸಾಲ ಘೋಷಣೆ!

state

ರಾಜ್ಯದಲ್ಲಿ ಸಿಎಂ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ತಮ್ಮ ಚೊಚ್ಚಲ ಬಜೆಟ್ ಅನ್ನು ಯಶಸ್ವಿಗೊಳಿಸಿದರು. ಹಲವು ವಿಭಾಗಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಬಜೆಟ್(Budget) ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಪೈಕಿಯಲ್ಲಿ ಕೃಷಿ ವಿಭಾಗಕ್ಕೆ 33,700 ಕೋಟಿ ರೂಪಾಯಿ ಮೀಸಲಿಟ್ಟರು. ಈ ನಡುವೆ ಮೇಕೆದಾಟು ಯೋಜನೆಗೆ 1000 ರೂಪಾಯಿ ಕೋಟಿ ಮೀಸಲಿಟ್ಟರು. ಸದ್ಯ ಉದ್ಯಮದಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಹೆಚ್ಚಿಸಲು, ಸರ್ಕಾರವು ಅವರ ವ್ಯವಹಾರಗಳಿಗೆ ಸಾಲದ ಮೂಲಕ ಬೆಂಬಲವನ್ನು ನೀಡುವ ಯೋಚನೆ ನಡೆಸಿದೆ.

ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ ಗುರುತಿಸಿರುವ ಮಹಿಳಾ ಉದ್ಯಮಿಗಳು ಮತ್ತು ಮಹಿಳಾ ನೇತೃತ್ವದ ಪ್ರಮುಖ ಸ್ಟಾರ್ಟ್‌ಅಪ್‌ಗಳಿಗೆ 10 ಲಕ್ಷ ರೂಪಾಯಿ ಹಣವನ್ನು ನೇರ ಸಾಲವಾಗಿ ನೀಡಲಾಗುವುದು ಎಂದು ಬೊಮ್ಮಾಯಿ ಅವರು ಘೋಷಿಸಿದರು. ಈ ಸಾಲಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುವುದು.

ಇದಲ್ಲದೆ, ಎಸ್‌ಸಿ/ಎಸ್‌ಟಿ ಸಮುದಾಯದ 300 ಮಹಿಳಾ ಪದವೀಧರರಿಗೆ ಉದ್ಯಮಿಗಳಾಗಲು ಸಹಾಯ ಮಾಡಲು ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಐಐಎಂ, ಬೆಂಗಳೂರು ಅವಿವಾಹಿತ, ವಿಚ್ಛೇದಿತ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿಯನ್ನು 600 ರೂ.ನಿಂದ 800 ರೂ.ಗೆ ಹೆಚ್ಚಿಸಲಾಗುವುದು. ಈ ಮೂಲಕ 1.32 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ ಎಂದು ಸಿಎಂ ಹೇಳಿದರು ಜೊತೆಗೆ ಆಸಿಡ್ ಸಂತ್ರಸ್ತ ಮಹಿಳೆಯರ ಮಾಸಿಕ ಪಿಂಚಣಿಯನ್ನು 3,000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

Exit mobile version