`ದ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಸಜ್ಜಾದ್ರಾ ಸಿಎಂ ಬೊಮ್ಮಾಯಿ?

basavaraj bommai

ಹಿಂದಿ(Hindi) ಭಾಷೆಯಲ್ಲಿ(Language) ಬಿಡುಗಡೆಗೊಂಡ ದ ಕಾಶ್ಮೀರ್ ಫೈಲ್ಸ್'(The Kashmir Files) ಸಿನಿಮಾ ಇಂದು ದೇಶಾದ್ಯಂತ ಭಾರಿ ಸಂಚಲವನ್ನು ಸೃಷ್ಟಿಮಾಡಿದೆ. ಸದ್ಯ ಈ ಸಿನಿಮಾ ಕುರಿತು ಅನೇಕ ವಿವಾದಗಳು ಹುಟ್ಟಿಕೊಂಡಿದ್ದು, ಈ ವಿವಾದಗಳು ದಿನದಿಂದ ದಿನಕ್ಕೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ.`ದ ಕಾಶ್ಮೀರಿ ಫೈಲ್ಸ್’ ಸಿನಿಮಾ ಕರ್ನಾಟಕದಲ್ಲೂ ಬಿಡಗುಡೆಗೊಂಡು ಭಾರಿ ಸದ್ದು ಮಾಡಿದೆ. ಈ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನ ಕಾಣಲಿ ನಮಗೆ ಬೇಸರಿವಿಲ್ಲ, ಆದರೆ, ಹಿಂದಿ ಭಾಷೆಯ ಅವತರಣಿಕೆ ಬೇಡ!

ನಿಮ್ಮ ಸರ್ಕಾರ ಕನ್ನಡ ಸಿನಿಮಾಗಳ ಮಧ್ಯೆ ಈ ಸಿನಿಮಾವನ್ನು ಹಿಂದಿಯಲ್ಲಿ ನೋಡಿ ಎಂದು ಯಾರಿಗೂ ಹೇಳಬೇಡಿ. ಅದು ತಪ್ಪು. ಕರ್ನಾಟಕದಲ್ಲಿ ಕನ್ನಡಿಗರು ಇದ್ದಾರೆ. ಅವರಿಗೆ ಬೇಕಿರುವುದು ಕನ್ನಡ ಭಾಷೆಯಲ್ಲಿಯೇ ವಿನಃ ಹಿಂದಿ ಭಾಷೆಯಲ್ಲಿ ಅಲ್ಲ ಎಂದು ಕೆಲವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ. ಬಾಲಿವುಡ್ ಅಂಗಳದಲ್ಲಿ ನಿರ್ಮಾಣಗೊಂಡ `ದ ಕಾಶ್ಮೀರ್ ಫೈಲ್ಸ್’ ಸಿನಿಮಾ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೇ ಪಡೆದುಕೊಂಡಿದೆ.

ರಾಜಕೀಯ ವಲಯದಲ್ಲಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಮರ ಬಿಡುವಿಲ್ಲದೇ ನಡೆಯುತ್ತಿದೆ. ಸದ್ಯ ಈ ಕುರಿತು ಕರ್ನಾಟಕದಲ್ಲಿ ಕೇಳಿ ಬಂದಿರುವ ವಿವಾದಗಳ ಬಗ್ಗೆ ತಲೆಕಡಿಸಿಕೊಳ್ಳದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕನ್ನಡ ಅವತರಣಿಕೆಯಲ್ಲಿ ದ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ರಾಜ್ಯದ ಜನತೆಗೆ ತೋರಿಸುವ ಬಗ್ಗೆ ಚಿಂತಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಬೊಮ್ಮಾಯಿ ಅವರು ತಮ್ಮ ಆಪ್ತ ಸಚಿವರೊಡನೆ ಮಾತನಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈಗಾಗಲೇ ಸಚಿವ ಸಂಪುಟ ಸಹೋದ್ಯೋಗಿಗಳೊಡನೆ ಸಿನಿಮಾ ವೀಕ್ಷಿಸಿರುವ ಸಿಎಂ, ವಿರೋಧ ಪಕ್ಷದ ಸದಸ್ಯರಿಗೂ ಸಿನಿಮಾ ನೋಡುವಂತೆ ಕೋರಿದ್ದಾರೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಹಲವರು, ಸಿಎಂ ಬೊಮ್ಮಾಯಿ ಅವರೇ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಸಿ, ಆಮೇಲೆ ನೋಡೋಣ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಹೀಗಾಗಿ ಕರ್ನಾಟಕದ ಜನತೆಗೆ ದ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡದಲ್ಲೇ ತೋರಿಸಲು ಬಿಜೆಪಿ ಪಕ್ಷ ಸಜ್ಜಾಗಿದೆ ಎನ್ನಲಾಗಿದೆ.

Exit mobile version