ಕೌನ್‌ ಬನೇಗ ಕರೋಡ್‌ ಪತಿಯಲ್ಲಿ ಗೆದ್ದ 16 ಕೋಟಿ ರೂಪಾಯಿ ಮಗುವಿಗೆ ದಾನ ಮಾಡಿದ ಅಮಿತಾಬಚ್ಚನ್‌

ಕೌನ್‌ ಬನೇಗಾ ಕರೋಡ್‌ ಪತಿ ಸ್ಪರ್ಧೆ ಈ ಬಾರಿ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲಿದೆ. ಈ ಸಂಚಿಕೆಯಲ್ಲಿ ಗೆದ್ದ ಹಣವನ್ನು ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ಮಗುವಿಗೆ  RS 16 ಕೋಟಿ ಚುಚ್ಚುಮದ್ದು ಪಡೆಯಲು ಸಹಾಯ ಮಾಡಲು ದಾನ ಮಾಡಲು ನಿರ್ಧರಿಸಿರುತ್ತಾರೆ. ಈ ಭಾರೀ ಮೊತ್ತದ ಹಣವನ್ನು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ನಿರೂಪಕ ಅಮಿತಾ ಬಚ್ಚನ್ ಸ್ವಯಂಪ್ರೇರಿತವಾಗಿ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ) ಬಳಲುತ್ತಿರುವ ಮಗುವಿಗೆ RS 16 ಕೋಟಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಔಷಧವನ್ನು ಖರೀದಿಸಲು ಅಮಿತಾಬ್ ಬಚ್ಚನ್ ಈ ಸಂಚಿಕೆಯನ್ನು ಆಯೋಜಿಸಿ ಆ ಮೂಲಕ ಸಂಗ್ರಹ ಆಗುವ ಹಣವನ್ನು ದಾನ ( Donation ) ಮಾಡಲು ಮುಂದಾಗಿದ್ದಾರೆ..

ಕೌನ್ ಬನೇಗಾ ಕರೋಡ್ ಪತಿ- 13 ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಚಲನಚಿತ್ರ ನಿರ್ಮಾಪಕಿ, ನೃತ್ಯ ಸಂಯೋಜಕಿ ಫರಾ ಖಾನ್ ಅವರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ ಗೆದ್ದ ಮೊತ್ತವನ್ನು ಮಗುವಿನ ಚಿಕಿತ್ಸೆಗೆ ಬೇಕಾಗಿರುವ ದುಬಾರಿ ಇಂಜೆಕ್ಷನ್‌ ಖರೀದಿಸಲು ನೀಡುವುದಾಗಿ ಘೋಷಿಸಿದ್ದಾರೆ.

Exit mobile version