ಕೋವಿಡ್‌ ನಿಯಂತ್ರಣಕ್ಕೆ ಕೇರಳ ಸರ್ಕಾರ ಕ್ರಮ: ಪಿಪಿಇ ಕಿಟ್‌ 273ರೂ., N95 ಮಾಸ್ಕ್‌ 23ರೂ. ದರ ನಿಗದಿ

ತಿರುವನಂತಪುರ, ಮೇ. 15: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವ ಕೇರಳ ಸರ್ಕಾರ ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಯ ದರ ಇಳಿಕೆ ಮಾಡಿದ ನಂತರ ಕೇರಳ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.

ಕೋವಿಡ್‌ ನಿರ್ವಹಣೆಗೆ ಅಗತ್ಯವಿರುವ ಪಿಪಿಇ ಕಿಟ್‌, ಮಾಸ್ಕ್‌ ಸೇರಿದಂತೆ ಹಲವು ವಸ್ತುಗಳ ಬೆಲೆಯನ್ನು ಸಮಾನ್ಯರ ಕೈಗೆಟುವಂತೆ ಪಿಣರಾಯಿ ವಿಜಯನ್‌ ಸರ್ಕಾರ ಇಳಿಕೆ ಮಾಡಿದೆ.

ಕೇರಳ ಅತ್ಯಗತ್ಯ ಸರಕುಗಳ ನಿರ್ವಹಣೆ ವಿಧಿ 1986 ವಿಧಿಯಡಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಹೊರಡಿಸಿರುವ ಆದೇಶದಂತೆ ಇನ್ನುಮುಂದೆ ಕೇರಳದಲ್ಲಿ ಪಿಪಿಇ ಕಿಟ್‌ ಬೆಲೆ 273, ಎನ್‌ 95 ಮಾಸ್ಕ್‌ ಬೆಲೆ 22 ಹಾಗೂ ಪಲ್ಸ್‌ ಆಕ್ಸಿಮೀಟರ್‌ ಬೆಲೆ 1500 ಮೀರದಂತೆ ನಿಯಮ ರೂಪಿಸಲಾಗಿದೆ.

ಖಾಸಗಿ ಆಸ್ಪತ್ರೆಗಳ ಶೇ. 50ರಷ್ಟು ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಆದೇಶಿಸಿದ ಕೇರಳ ಸರ್ಕಾರವು, ಚಿಕಿತ್ಸೆಯ ದರವನ್ನೂ ಇಳಿಕೆ ಮಾಡಿತ್ತು. ಕಳೆದ ಏಪ್ರಿಲ್‌ 29ರಂದು ಖಾಸಗಿ ಆಸ್ಪತ್ರೆಯಲ್ಲಿ 1700 ರೂ. ಇದ್ದ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಬೆಲೆಯನ್ನು 500ರೂ.ಗೆ ಇಳಿಸಲಾಗಿತ್ತು.

Exit mobile version