ಕೇರಳದಲ್ಲಿ ಇನ್ನೂ 3 ದಿನ ಭಾರೀ ಮಳೆ

ತಿರುವನಂತಪುರ ಅ 20 : ಕೇರಳದಲ್ಲಿ ಐದಾರು ದಿನಗಳಿಂದಲೂ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರದಿಂದ ಇಲ್ಲಿಯವರೆಗೆ 30 ಜನರು ಮೃತಪಟ್ಟಿದ್ದಾರೆ. 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆಯಾಗಿದೆ. ಅದರಲ್ಲಿ 13 ಮೃತದೇಹಗಳು ಪತ್ತೆಯಾಗಿದ್ದು ಕೊಟ್ಟಾಯಂ ಜಿಲ್ಲೆಯಲ್ಲಿ. ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಇನ್ನು ತಿರುವನಂತಪುರಂನಲ್ಲೂ ಒಂದು ಮನೆ ಕುಸಿದುಬಿದ್ದಿದೆ. ಆ ಮನೆಯಲ್ಲಿ ಆರು ಮಂದಿ ಇದ್ದು, ಎಲ್ಲರೂ ಅವಶೇಷಗಳಡಿ ಸಿಲುಕಿದ್ದರು. ಅದೃಷ್ಟವಶಾತ್​ ಎಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಲಾಗಿದೆ.  ಈ ಮನೆಯಲ್ಲಿ 80 ವರ್ಷದ ಮಹಿಳೆ ಲೀಲಾ ಎಂಬುವರು ಅಡುಗೆ ಮನೆ ಸಮೀಪ ಮಲಗಿದ್ದರು. ಮನೆ ಕುಸಿಯುತ್ತಿರುವುದು ಮೊದಲು ಅವರಿಗೇ ಗೊತ್ತಾಗಿದ್ದು. ಇವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಬಂದು ಇವರನ್ನೆಲ್ಲ ಕಾಪಾಡಿದ್ದಾರೆ

ಈಗಾಗಲೇ ಮಳೆರಾಯನದಾಳಿಯಿಂದ ತತ್ತರಿಸಿ ಹೋಗಿರುವ ಕೇರಳದಲ್ಲಿ ಅ. 20ರಿಂದ 23ರ ಅವಧಿಯಲ್ಲಿ ಮತ್ತಷ್ಟು ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾ ತಿಳಿಸಿದೆ. ಕೇರಳ ಮಾತ್ರವಲ್ಲದೆ, ತಮಿಳುನಾಡು, ಪುದುಚೇರಿಯಲ್ಲೂ ಧಾರಾಕಾರ ಮಳೆಯಾಗಲಿದೆ. ಎಂದಿರುವ ಇಲಾಖೆ, ಲಡಾಖ್‌ ಹಾಗೂ ಜಮ್ಮು ಕಾಶ್ಮೀರದಲ್ಲಿ ಅತೀವ ಹಿಮಪಾತವಾಗ ಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಅಗಾಧವಾಗಿ ಸುರಿದ ಮಳೆಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಅಲ್ಲಿ 30 ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲಿನ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಐಎಂಡಿ ಹೇಳಿರುವುದು ಮತ್ತಷ್ಟು ಆತಂಕವನ್ನುಂಟುಮಾಡಿದೆ

Exit mobile version