ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಹಂತಕರು, ಜೈಪುರದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದರು : ಪೊಲೀಸರು

rajasthan

ಮಂಗಳವಾರ ರಾಜಸ್ಥಾನದ(Rajasthan) ಉದಯಪುರದಲ್ಲಿ(Udaipur) ಇಬ್ಬರು ವ್ಯಕ್ತಿಗಳು ಹಿಂದೂ ಟೈಲರ್ ಕನ್ನಯ್ಯಾ ಎಂಬ ವ್ಯಕ್ತಿಯ ಶಿರಚ್ಚೇಧ ಮಾಡಿದ್ದಾರೆ. ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ(Nupur Sharma) ಅವರ ಹೇಳಿಕೆಯನ್ನು ಬೆಂಬಲಿಸಿ, ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ, ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನದ ಪ್ರತೀಕಾರ ಇದು ಎಂದು ಹೇಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಭೀಕರ ಹತ್ಯೆಯು ರಾಜ್ಯದಲ್ಲಿ ಆಕ್ರೋಶ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದೆ. ರಾಜಸ್ಥಾನದ ಕೆಲವೆಡೆ ಒಂದು ತಿಂಗಳ ಕಾಲ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳಲ್ಲಿ ಒಬ್ಬ 2014ರಲ್ಲಿ ಪಾಕಿಸ್ತಾನದ(Pakistan) ಕರಾಚಿಗೆ ಹೋಗಿದ್ದು, ದಾವತ್-ಎ-ಇಸ್ಲಾಮಿ ಜತೆ ಸಂಪರ್ಕ ಹೊಂದಿದ್ದನು ಎಂದು ರಾಜಸ್ಥಾನ ಡಿಜಿಪಿ(DGP) ಎಂಎಲ್ ಲಾಥರ್ ಹೇಳಿದ್ದಾರೆ. ಹತ್ಯೆಯಾದ ಕುಟುಂಬವನ್ನು ಭೇಟಿ ಮಾಡಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಉದಯಪುರಕ್ಕೆ ಭೇಟಿ ನೀಡಲಿದ್ದಾರೆ.

ಇನ್ನು ಉದಯಪುರ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ, ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ವಿರೋಧಿಸಿ ಹಿಂದೂ ಜಾಗರಣ ಮಂಚ್ ಉತ್ತರ ಪ್ರದೇಶದ(Uttarpradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ಪ್ರತಿಭಟನೆ ಬೃಹತ್ ನಡೆಸಿದೆ. ಮತ್ತೊಂದು ಬಲಪಂಥೀಯ ಸಂಘಟನೆಯು ಅಲಿಘರ್‌ನಲ್ಲಿ ಪ್ರತಿಭಟನೆಯನ್ನು ನಡೆಸಿತು ಮತ್ತು ಘಟನೆಯ ವಿರುದ್ಧ ಪ್ರತಿಭಟಿಸಲು ಬ್ಯಾನರ್ಗಳನ್ನು ಸುಟ್ಟುಹಾಕಿದ್ದಾರೆ. ಲಕ್ನೋದಲ್ಲಿ ಹಿಂದೂ ಯುವ ವಾಹಿನಿ ಬೀದಿಗಿಳಿದು ಪ್ರತಿಭಟನೆ ನಡೆಸಿತು. ಉದಯಪುರದಲ್ಲಿ ಪ್ರತಿಭಟನೆ ತೀವ್ರತೆ ಪಡೆಯುತ್ತಿದ್ದಂತೆ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಉದಯಪುರ ಟೈಲರ್ ಹತ್ಯೆಗೈದ ಹಂತಕರು ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಇವರು ಜೈಪುರದಲ್ಲಿ ಭಯೋತ್ಪಾದಕ(Terrorist) ದಾಳಿಗಳನ್ನು ಯೋಜಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉದಯಪುರ ಟೈಲರ್ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿವೆ. ಮಾರ್ಚ್ 30 ರಂದು ಜೈಪುರದಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಪಿತೂರಿಯ ಭಾಗವಾಗಿದ್ದರು.

ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಮೂಲಕ, ಅವರು ISIS ನ ರಿಮೋಟ್ ಸ್ಲೀಪರ್ ಸಂಘಟನೆಯಾದ ಅಲ್-ಸುಫಾದೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ ಉದಯಪುರದ ಅಲ್-ಸುಫಾ ಮುಖ್ಯಸ್ಥನಾಗಿದ್ದ. ಈ ಹಿಂದೆ ಟೋಂಕ್‌ನಿಂದ ಬಂಧನಕ್ಕೊಳಗಾಗಿದ್ದ ಐಸಿಸ್ ಭಯೋತ್ಪಾದಕ ಮುಜೀಬ್ ಜತೆಗೂ ಈತ ಸಂಬಂಧ ಹೊಂದಿದ್ದ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Exit mobile version