ಆರ್ಯನ್ ಖಾನ್ ಅವರ ಬಂಧನದ ಹಿಂದಿದೆ ಸಮೀರ್ ವಾಂಖೆಡೆ ಷಡ್ಯಂತ್ರ- ಕಿಶೋರ್​ ತಿವಾರಿ

 ಮುಂಬೈನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಶಿವಸೇನಾ ನಾಯಕ ಕಿಶೋರ್​ ತಿವಾರಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದ ಮೇಲೆ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಕೆಲವರು ಎನ್​ಸಿಬಿ ಅಧಿಕಾರಿಗಳ ಪರ ಮಾತನಾಡುತ್ತಿದ್ದರೆ, ಇನ್ನೂ ಕೆಲವರು ಆರ್ಯನ್​ ಖಾನ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ಸ್ಟಾರ್​ ಪುತ್ರನನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಕೆಲವರು ಆರೋಪ ಹೊರಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಅವರು ಬಾಲಿವುಡ್​ ಸೆಲೆಬ್ರಿಟಿಗಳನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಶಿವಸೇನಾ ಮುಂಖಡ ಕಿಶೋರ್​ ತಿವಾರಿ ಆರೋಪಿಸಿದ್ದಾರೆ.

ಈ ಬಗ್ಗೆ  ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಿಶೋರ್​ ತಿವಾರಿ ಅವರು ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಕೆಲವು ಆರೋಪಗಳನ್ನು ಹೊರಿಸಿದ್ದಾರೆ. ಸಮೀರ್​ ವಾಂಖೆಡೆ ಪತ್ನಿ ಕ್ರಾಂತಿ ಕೇದ್ಕರ್​ ಅವರು ಬಾಲಿವುಡ್​ನಲ್ಲಿ ಮಿಂಚಬೇಕು ಎಂದುಕೊಂಡಿದ್ದರು. ಆದರೆ ಯಶಸ್ವಿ ಆಗಲಿಲ್ಲ. ಆ ಸೇಡಿಗಾಗಿ ಅವರು ಬಾಲಿವುಡ್​ ಸೆಲೆಬ್ರಿಟಿಗಳ ಮೇಲೆ ಪದೇಪದೇ ದಾಳಿ ಮಾಡುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಡೆದ ಡ್ರಗ್ಸ್​ ದಾಳಿಗೆ ಈ ದ್ವೇಷವೇ ಕಾರಣ ಎಂಬುದು ಕಿಶೋರ್​ ತಿವಾರಿ ಆರೋಪವಾಗಿದೆ.

Exit mobile version