ಕೋವಿಡ್‌: ಒಂದೇ ಇಂಜೆಕ್ಷನ್‌ಗೆ ಮೂರು ಬೆಲೆ, ಸೀರಂ ಸ್ಪಷ್ಟನೆ

ಮುಂಬೈ, ಏ. 21: ಕೊರೊನಾ ಸೋಂಕು ತಡೆಗಟ್ಟಲು ಸಾರ್ವಜನಿಕರಿಗೆ ನೀಡುತ್ತಿರುವ ಕೋವಿಶಿಲ್ಡ್ ಲಸಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಹೇವಾರಿ ಬೆಲೆ ತೆತ್ತುತ್ತಿರುವ ಬಗ್ಗೆ ಸ್ವತಃ ಔಷಧಿ ಉತ್ಪಾದಕ ಸಂಸ್ಥೆಯಾದ ಸೀರಂ ಇನ್‌ಸ್ಟಿಟ್ಯೂಟ್ ಇಂಡಿಯಾ ಸಂಸ್ಥೆಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಪ್ರತಿ ಡೋಸೆಜ್‌ಗೆ 150 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರಗಳು 400 ರೂ. ನೀಡುತ್ತಿವೆ. ಖಾಸಗಿ ಆಸ್ಪತ್ರೆಗಳು 600 ರೂ. ನೀಡಿ ಖರೀದಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಸೀರಂ ಸಂಸ್ಥೆಯ ಪ್ರಕಟಣೆ ಹೊರ ಬೀಳುತ್ತಿದ್ದಂತೆ ರಾಷ್ಟ್ರಾದ್ಯಂತ ಟೀಕೆಗಳು ವ್ಯಕ್ತವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಾಳಮೇಳ ಇಲ್ಲದಿರುವುದೇ ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ.

ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿ, ಇದನ್ನು ಒಪ್ಪಲಾಗದು. ‘ಕೇಂದ್ರ ಸರ್ಕಾರ ಖರೀದಿಸಿ ರಾಜ್ಯಗಳಿಗೆ ವಿತರಿಸುತ್ತಿದೆ. ಪ್ರಧಾನಿಗಳು ಪಿಎಂ ಕೇರ್ ಫಂಡ್‌ನಿಂದ 10 ಲಕ್ಷ ಕೋಟಿ ವ್ಯಯಿಸಿದ್ದಾರೆ. 70 ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಾವತ್ತಿಗೂ ಹಣ ವಿಧಿಸದೆ ಉಚಿತವಾಗಿ ಲಸಿಕೆ ನೀಡಿದೆ’ ಎಂದು ಹರಿಹಾಯ್ದಿದ್ದಾರೆ.

Exit mobile version