ಕೃಷ್ಣ ಜನ್ಮಭೂಮಿ ವಿವಾದ: ಸುಪ್ರೀಂ ಕೋರ್ಟ್‌ ಮೊರೆ ಹೋದ ಮಸೀದಿ ಸಮಿತಿ

Mathura: ಉತ್ತರ ಪ್ರದೇಶದ (Uttar Pradesh) ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ವಿವಾದಕ್ಕೆ ಸಂಬಂಧಪಟ್ಟಂತೆ ಶಾಹಿ ಈದ್ಗಾ ಮಸೀದಿ ಆವರಣದ ಸಮೀಕ್ಷೆಗೆ ಕಮಿಷನರ್ ನೇಮಕ ಮಾಡಲು ಅಲಹಾಬಾದ್ ಹೈಕೋರ್ಟ್‌ #AlahabadhHighcourt ಅನುಮತಿ ನೀಡಿದ್ದು, ಈ ಆದೇಶದ ವಿರುದ್ದ ಮಸೀದಿ ಸಮಿತಿ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಡಿಸೆಂಬರ್ 15ರಂದು ಅಲಹಾಬಾದ್ ಹೈಕೋರ್ಟ್‌, ನ್ಯಾಯಾಲದ ಮೇಲ್ವಿಚಾರಣೆಯಲ್ಲಿ ಕಮಿಷನರ್ ನೇತೃತ್ವದಲ್ಲಿ ಶಾಹಿ ಈದ್ಗಾ ಮಸೀದಿ (Shahi Eidgah Mosque) ಆವರಣದ ಸಮೀಕ್ಷೆಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಇದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಡಿಸೆಂಬರ್ (December) 15ರಂದು ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್‌ (Supreme Court), ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.

ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಮಸೀದಿ ಸಮಿತಿಯು ಔಪಚಾರಿಕವಾಗಿ ಪ್ರಶ್ನಿಸಿ ಅಡ್ವೊಕೇಟ್-ಆನ್-ರೆಕಾರ್ಡ್ (Advocate-on-Record) ಆರ್‌ಹೆಚ್‌ಎ ಸಿಕಂದರ್ ಮೂಲಕ ವಿಶೇಷ ರಜೆ ಅವಧಿಯ ಅರ್ಜಿಯನ್ನು ಸಲ್ಲಿಸಿದ್ದು, ಮಥುರಾದ ಕೃಷ್ಣ ಜನ್ಮ ಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಡಿ.14, 2023ರಂದು ಅಲಹಾಬಾದ್ ಹೈಕೋರ್ಟ್‌ ಮಾನ್ಯ ಮಾಡಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.

ಏನಿದು ಪ್ರಕರಣ:
ಮೊಘಲ್‌ ದೊರೆ ಔರಂಗಜೇಬನ (Aurangzeb) ಆದೇಶದಂತೆ ಕೃಷ್ಣನ ದೇಗುಲವನ್ನು ಧ್ವಂಸಗೊಳಿಸಿ, ಆ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಮಸೀದಿಯ ಗೋಡೆಗಳ ಮೇಲೆ ಕಮಲ, ಶೇಷನಾಗದ ಕೆತ್ತನೆಗಳಿದ್ದು, ಇದು ದೇವಾಲಯ ಎಂಬುದಕ್ಕೆ ಪುರಾವೆ ಎನಿಸಿವೆ. ಹಾಗಾಗಿ, ಸತ್ಯಾಸತ್ಯತೆ ತಿಳಿಯಲು ಸಮೀಕ್ಷೆ ನಡೆಸಬೇಕು,” ಎಂದು ಹಿಂದೂ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಬಂಧ ಸುಮಾರು 12ರಷ್ಟು ಅರ್ಜಿಗಳು ಈಗಾಗಲೇ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ಎಲ್ಲಾ ಅರ್ಜಿಗಳು ಕತ್ರಾ ಕೇಶವ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ 13.17 ಎಕರೆ ಜಾಗದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿವೆ.

ಭವ್ಯಶ್ರೀ ಆರ್ ಜೆ

Exit mobile version