ಆರ್ ಎಸ್ ಎಸ್ ಕಾರ್ಯಕರ್ತರು ದೇಶಕ್ಕಾಗಿ ಪ್ರಾಣವನ್ನು ಕೊಡಲು ಕೂಡ ಸಿದ್ದ – ಸಿ ಟಿ ರವಿ

ಬೆಂಗಳೂರು ಅ 6 : ಆರ್ ಎಸ್ ಎಸ್ ಕಾರ್ಯಕರ್ತರು ದೇಶಕ್ಕಾಗಿ ಪ್ರಾಣವನ್ನು ಕೊಡಲು ಕೂಡ ಸಿದ್ದರಾಗಿದ್ದಾರೆ ಆರ್ ಎಸ್ ಎಸ್ ಹಿನ್ನಲೆ ಗೊತ್ತಿಲ್ಲದೆ ಮಾತನಾಡುವುದು ಮೂರ್ಖತನ ಎಂದು  ಬಿಜಿಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.  

ಸೈನ್ಯಕ್ಕೆ ಸೇರುವ ಕೆಲವರು ಹೊಟ್ಟೆ ಪಾಡಿಗಾಗಿ ಸೇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಸೈನಿಕರನ್ನೇ ಅವಮಾನಿಸಿದ್ದರು. ಈ ದೇಶದ ಸೈನಿಕ ಕಷ್ಟಗಳ ಬಗ್ಗೆ ಅವರಿಗೆ ಅರಿವಿಲ್ಲ. ಸೈನಿಕರಲ್ಲಿ ದೇಶ ಭಕ್ತಿಯಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ವ್ಯಕ್ತಿಗಳಿಗೆ ಸವಾಲು ಹಾಕಿ ಕೇಳುತ್ತೇನೆ .ಒಂದು ಕೋಟಿ ರೂಪಾಯಿ ಸಂಬಳ ಕೊಟ್ಟರೂ ಇವರ ಮಕ್ಕಳನ್ನು ಸೇನೆಗೆ ಸೇರಿಸಲಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ಸೈನ್ಯಕ್ಕೆ ಸೇರಬೇಕಾದರೆ ದಿಲ್ಲು-ಧಮ್ಮು ಇರಬೇಕು. ಕೆಲ ಸಮಾಜಘಾತಕರು ಹೊಟ್ಟೆಪಾಡಿನ ವೃತ್ತಿ ಮಾಡುವ ಹೆಸರಲ್ಲಿ ತಲೆ ಹಿಡಿಯುವ ಕೂಡಾ ಕೆಲಸವನ್ನು ಮಾಡುತ್ತಾರೆ. ಸೈನ್ಯಕ್ಕೆ ಸೇರುವವರಿಗೆ ದೇಶ ಭಕ್ತಿಯಿರುತ್ತದೆ. ʼನಾನು ದೇಶಕ್ಕಾಗಿ ಪ್ರಾಣಕೊಡಲು ತಯಾರಿರುತ್ತಾರೆʼ ಅಂತಹವರನ್ನೂ ಅನುಮಾನಿಸಿದ ಇಂತಹವರು ಈ ಸಮಾಜದಲ್ಲಿರುವಾಗ ಯುಪಿಎಸ್‍ಸಿಯನ್ನು ಅನುಮಾನಿಸುವುದರಲ್ಲಿ ಅತಿಶಯೋಕ್ತಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಆರ್‍ಎಸ್‍ಎಸ್‍ಗೆ ದೇಶ ಶಕ್ತಿಶಾಲಿಯಾಗಬೇಕೆಂಬುದೇ ಅಜೆಂಡ. ಭಾರತ ವಿಶ್ವಗುರುವಾಗಬೇಕು ಎಂಬುದು ಅಜೆಂಡ. ಆರ್‌ಎಸ್‍ಎಸ್‍ನಲ್ಲಿ ಸ್ವಯಂಸೇವಕರಾದವರು ಜೀವನವನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ಯಾರೂ ಸ್ವಾರ್ಥಿಗಳಲ್ಲ. ʼನಾನು ನನ್ನ ಮಕ್ಕಳು, ಮರಿಮಕ್ಕಳುʼ ಈ ರಾಜ್ಯ ದೇಶ ಆಳ್ವಿಕೆ ಮಾಡಬೇಕು ಎಂಬ ಸ್ವಾರ್ಥವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ

ಆರ್‌ಎಸ್‌ಎಸ್‍ನಲ್ಲಿ ಯಾವುದೇ ಐಡಿಯಾಲಜಿಗಳಿಲ್ಲ. ʼನಾವು ಸಹ ಹಿಂದೂಗಳೇʼ ಎಂದು ಹೇಳಿರುವ ಕುಮಾರಸ್ವಾಮಿ ಅವರಿಗೆ ಆರ್‌ಎಸ್‍ಎಸ್ ಹಿಂದುತ್ವದ ಮೇಲೆ ಏಕೆ ಅನುಮಾನ. ಆರ್ ಎಸ್‍ ಎಸ್ ದೇಶ ಭಕ್ತ ಸಂಘಟನೆಯೇ ವಿನಾ ದೇಶವನ್ನು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕಾಗಿ ಜೋತು ಬೀಳುವ ಪಕ್ಷ ನಮ್ಮದಲ್ಲ. ದೇಶ ಸೇವೆಗಾಗಿ ಸದಾ ಸಿದ್ದರಿದ್ದೇವೆ. ಕೆಲವರ ಕೃಪಾಕಟಾಕ್ಷದಿಂದ 1989ರಲ್ಲಿ ಕೆಎಎಸ್‍ನಿಂದ ಐಎಎಸ್‍ಗೆ ಬಡ್ತಿ ಪಡೆದಿದ್ದ ಅಧಿಕಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ 2007ರಲ್ಲಿ ನೇಮಿಸಿ ಕೈಗೊಂಬೆಯನ್ನಾಗಿ ಮಾಡಿಕೊಂಡು ಮಾಡಬಾರದ ಅಕ್ರಮಗಳನ್ನು ಮಾಡಿದ್ದು ನಿಮಗೆ ನೆನಪಿಲ್ಲವೇ ಎಂದು ಅವರು ಎಂದು ಟೀಕಿಸಿದರು.

Exit mobile version