ರಾಜ್ಯದಲ್ಲಿ ಹಲಾಲ್(Halal) ವಿವಾದ(Controversy) ತೀವ್ರ ಚರ್ಚೆಯಾಗುತ್ತಿದ್ದು, ರಾಜಕೀಯ(Political) ವಲಯದಲ್ಲಿ ನನ್ನದೊಂದು ಹೇಳಿಕೆಯಿರಲಿ ಎಂದು ರಾಜಕಾರಣಿಗಳ ತಮ್ಮ ಶೈಲಿಯಲ್ಲಿ ಮಾತಿನ ಅಸ್ತ್ರಗಳನ್ನು ಬಿಡುತ್ತಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ(Former CM) ಹೆಚ್.ಡಿ ಕುಮಾರ್‍ಸ್ವಾಮಿ(HD Kumarswamy) ಅವರು ಹಲಾಲ್ ವಿಚಾರದಲ್ಲಿ ಬುಗಿಲೆದ್ದಿರುವ ಕೋಲಾಹಲದ ಬಗ್ಗೆ ಆರೋಪ ಎಸಗಿದ್ದಾರೆ.

ತಮ್ಮ ಮಾತಿನ ವರಸೆಯಲ್ಲಿ ಸಿಎಂ ಕುರಿತು ಮತನಾಡುವಾಗ ಹೆಚ್.ಡಿ.ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ರೆ ನನ್ನ ಕೇಳಲಿ ಎಂದು ಗುಡುಗಿದ್ದಾರೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಲಾಲ್ ವಿಚಾರ ಬಹಳ ಮುಖ್ಯವಾದ ಸಂಗತಿ ಎಂಬಂತೆ ಚರ್ಚೆ ಮಾಡಲಾಗುತ್ತಿದೆ. ಸದ್ಯ ಇದೇ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಇಡೀ ರಾಜ್ಯದಲ್ಲಿ ಹಲಾಲ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ, ಇದು ಚರ್ಚೆ ಮಾಡುವಂತ ವಿಚಾರವಾ? ಇಷ್ಟು ದಿನ ತಿಂದುಕೊಂಡು ಬಂದಿದ್ದೀವಿ ತಾನೇ? ಯಾರಿಗಾದರೂ ಏನಾದರೂ ತೊಂದರೆಯಾಗಿದ್ದೀಯಾ?
ಹಲಾಲ್ ಎಂಬುದು ಇಂದು ಬಂದಿರುವ ಹೊಸ ನಿಯಮವಾ? ಅಂದಿನಿಂದಲೂ ಇದು ನಡೆಯುತ್ತಲೇ ಇದೇ, ಹಲಾಲ್ ಮಾಂಸವನ್ನು ನಾವು ಸೇವಿಸುತ್ತ ಬಂದಿದ್ದೇವೆ, ಅದರಲ್ಲಿ ಹೊಸ ವಿಷಯವೇನಿದೆ? ಚರ್ಚೆ ಮಾಡುವ ಅಗತ್ಯವೇನಿದೆ? ಈ ಭಜರಂಗದಳದವರು ಸೇರಿದಂತೆ ಕೆಲವರಿಗೆ ಮಾಡೋದಿಕ್ಕೆ ಏನು ಕೆಲಸವಿಲ್ಲಾ ಅದಕ್ಕಾಗಿಯೇ ಬಿದಿ ಬಿದಿಗೆ ಹೋಗಿ ಹಲಾಲ್ ವಿರುದ್ಧ ಕರಪತ್ರ ಹಂಚಿ ಬಂದಿದ್ದಾರೆ. ಕರಪತ್ರ ಹಂಚಿ ಬರುವಂತ ವಿಷಯ ಏನು ಇಲ್ಲ! ಇದೆಲ್ಲಾ ಕುತಂತ್ರಗಳು ಅಷ್ಟೇ! ರಾಜ್ಯದಲ್ಲಿ ಇಂಥ ಕೋಮು ಗಲಭೆ ಉಂಟು ಮಾಡುವ ಸನ್ನಿವೇಶಗಳು ನಡೆಯುತ್ತಿದ್ದರು ಸಿಎಂ ಸುಮ್ಮನೆ ಕುಳಿತ್ತಿದ್ದಾರೆ? ಯಾಕೆ ಅವರಿಗೆ ಪ್ರಶ್ನಿಸಲು ಗಂಡಸ್ತನ ಇಲ್ವಾ ಎಂದು ಆಕ್ರೋಶದಲ್ಲಿ ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಹೇಳಿಕೆಯ ಬೆನ್ನಲ್ಲೇ ರಾಜಕೀಯ ವಲಯದಿಂದ, ಬಿಜೆಪಿ ನಾಯಕರಿಂದ ಆರೋಪಗಳು ವ್ಯಕ್ತವಾದವೂ. ಈ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ ಅವರು ಗಂಡಸ್ತನ ಎಂಬ ಪದ ಎಲ್ಲಿ ಬಳಸಬೇಕೋ ಅಲ್ಲಿ ಬಳಸಲಿ ಎಂದು ಹೇಳುವ ಮೂಲಕ ಹೆಚ್.ಡಿ.ಕೆಗೆ ತಿರುಗೇಟು ನೀಡಿದ್ದಾರೆ. ಹೆಚ್.ಡಿ.ಕೆ ಹೇಳಿಕೆಗೆ ತೀವ್ರ ಒತ್ತಡ ಕೇಳಿಬಂದ ಹಿನ್ನೆಲೆ, ನನ್ನ ಮಾತಿನ ಪ್ರಹಾರದಲ್ಲಿ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಿರಲಿ! ಈ ಕುರಿತು ನಾನು ಎಲ್ಲಾರಲ್ಲೂ ವಿಷಾಧಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.