ಭಾರತ ತಿರುಗೇಟು: ರಾಜತಾಂತ್ರಿಕ ಅಧಿಕಾರಿ ಉಚ್ಛಾಟನೆ, ಭಾರತ ಬಿಟ್ಟು ತೆರಳುವಂತೆ ಸೂಚನೆ

New Delhi: ತನ್ನ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಛಾಟನೆ ಮಾಡಿರುವ ಕೆನಡಾಕ್ಕೆ (Canada) ಭಾರತ ಅಷ್ಟೇ ತೀಕ್ಷ್ಣ ತಿರುಗೇಟು ನೀಡಿದೆ. ಭಾರತದಲ್ಲಿನ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟನೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಐದು ದಿನಗಳ ಒಳಗೆ ದೇಶ ತೊರೆಯುವಂತೆ ಸೂಚನೆ ನೀಡಿದೆ.

ಖಲಿಸ್ತಾನಿ (Khalistani) ಉಗ್ರನ ಹತ್ಯೆ ವಿಚಾರವಾಗಿ ಭಾರತದ ಮೇಲೆ ಆರೋಪ ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರ ಸರ್ಕಾರ ಭಾರತದ ಉನ್ನತ ರಾಯಭಾರಿಯನ್ನು ಉಚ್ಛಾಟನೆ ಮಾಡಿದ ಬೆನ್ನಲ್ಲೇ ಭಾರತ ಕೂಡ ಪ್ರತೀಕಾರ ತೀರಿಸಿಕೊಂಡಿದೆ. ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಮಂಗಳವಾರ ಉಚ್ಛಾಟನೆ ಮಾಡಿದ್ದಕ್ಕೆ ಭಾರತ ಇನ್ನು ಐದು ದಿನಗಳಲ್ಲಿ ದೇಶ ತೊರೆಯುವಂತೆ ಸೂಚನೆ ನೀಡಿದೆ

ಭಾರತದಲ್ಲಿ ಕೆನಡಾ ಹೈ ಕಮಿಷನರ್‌ಗೆ #HighCommissioner ಸಮನ್ ನೀಡಿದ್ದು, ದೇಶದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರೊಬ್ಬರ ಉಚ್ಛಾಟನೆಗೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಆ ಸಂಬಂಧಿತ ರಾಜತಾಂತ್ರಿಕರು ಮುಂದಿನ ಐದು ದಿನಗಳ ಒಳಗೆ ಭಾರತವನ್ನು ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಕೆನಡಾ ಪ್ರಧಾನಿ ಟ್ರುಡೋ ಆರೋಪವೇನು?
ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ (House of Commons) ಸೋಮವಾರ ಮಾತನಾಡಿದ್ದ ಪ್ರಧಾನಿ ಜಸ್ಟಿನ್ ಟ್ರುಡೋ, ಜೂನ್‌ನಲ್ಲಿ ನಡೆದ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್‌ಗಳ ಕೈವಾಡ ಇದೆ ಎಂಬ ವಿಶ್ವಾಸಾರ್ಹ ಆರೋಪಗಳ ಬಗ್ಗೆ ಕೆನಡಾದ ಭದ್ರತಾ ಸಂಸ್ಥೆಗಳು ಕೂಲಂಕಷ ತನಿಖೆ ನಡೆಸುತ್ತಿವೆ ಎಂದು ಹೇಳಿದ್ದರು. ಅಲ್ಲದೆ ಈ ಬಗ್ಗೆ ಜಿ20 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ @NarendraModi ಅವರ ಬಳಿ ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದರು.

ಟ್ರುಡೋ ಅವರ ಹೇಳಿಕೆಯ ಬೆನ್ನಲ್ಲೇ ಕೆನಡಾದಲ್ಲಿನ ಭಾರತದ ಗುಪ್ತಚರ ಸಂಸ್ಥೆ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥರನ್ನು ಉಚ್ಛಾಟನೆ ಮಾಡಿರುವುದಾಗಿ ವಿದೇಶಾಂಗ ಸಚಿವೆ ಮೆಲಾನೀ ಜೋಲಿ ಪ್ರಕಟಿಸಿದ್ದರು.

‘ಖಲಿಸ್ತಾನ್ ಪ್ರತ್ಯೇಕತಾವಾದಿ ಹತ್ಯೆ ಹಿಂದೆ ಭಾರತವಿದೆ’ ಎಂದ ಕೆನಡಾ ಪ್ರಧಾನಿಗೆ
ಕೆನಡಾದ ನಡೆಗೆ ತಕ್ಕ ಪ್ರತಿಕ್ರಿಯೆ ನೀಡಿರುವ ಭಾರತ, “ನಮ್ಮ ಆಂತರಿಕ ವಿಷಯಗಳಲ್ಲಿ ಕೆನಡಾ ರಾಜತಾಂತ್ರಿಕರ ಹಸ್ತಕ್ಷೇಪ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ” ಕಾರಣದಿಂದ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಉಚ್ಛಾಟನೆ ಮಾಡುತ್ತಿರುವುದಾಗಿ ತಿಳಿಸಿದೆ.

ಕೆನಡಾದ ಆರೋಪಗಳನ್ನು ತಿರಸ್ಕರಿಸಿರುವ ಭಾರತ, ಇದು ‘ಅಸಂಬದ್ಧ ಮತ್ತು ಪ್ರಚೋದಿತ’ ಎಂದು ಪ್ರತ್ಯಾರೋಪ ಮಾಡಿದೆ. ಕಾನೂನಿನ ನಿಯಮಕ್ಕೆ ಭಾರತ ಎಂದಿಗೂ ಬದ್ಧವಾಗಿದೆ ಎಂದುತಿಳಿಸಿದರು. ಕೆನಡಾ ಪ್ರಧಾನಿ ಅವರ ಸಂಸತ್‌ನಲ್ಲಿ ನೀಡಿರುವ ಹೇಳಿಕೆಯನ್ನು ಮತ್ತು ಅವರ ವಿದೇಶಾಂಗ ಸಚಿವರ ಹೇಳಿಕೆಯನ್ನೂ ನಾವು ಗಮನಿಸಿದ್ದು, ಅವುಗಳನ್ನು ತಿರಸ್ಕರಿಸುತ್ತೇವೆ. ಕೆನಡಾದಲ್ಲಿ ಯಾವುದೇ ಹಿಂಸಾತ್ಮಕ ಕೃತ್ಯದಲ್ಲಿ ಭಾರತ ಭಾಗಿಯಾಗಿದೆ ಎಂಬ ಆರೋಪವು ಅಸಂಬದ್ಧ ಮತ್ತು ಪ್ರಚೋದಿತ” ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ಖಲಿಸ್ತಾನಿ ಉಗ್ರನನ್ನು ತನ್ನ ಪ್ರಜೆ ಎಂದ ಕೆನಡಾ: ಯಾರಿದು ಹರ್ದೀಪ್ ಸಿಂಗ್ ನಿಜ್ಜರ್?
ಅಮೇರಿಕ ಕಳವಳ:ಭಾರತ ಮತ್ತು ಕೆನಡಾ ನಡುವಿನ ಹೊಸ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ, ಟ್ರುಡೋ ಮಾಡಿರುವ ಆರೋಪಗಳ ಬಗ್ಗೆ ತೀವ್ರ ಕಳವಳ ಹೊಂದಿರುವುದಾಗಿ ತಿಳಿಸಿದೆ.

“ಕೆನಡಾ ಅಧಿಕಾರಿಗಳ ಜೊತೆ ನಾವು ಎಂದಿನಂತೆ ಸಂಪರ್ಕದಲ್ಲಿ ಇದ್ದೇವೆ. ಕೆನಡಾದ ತನಿಖೆ ಮುಂದುವರಿಯುವುದು ಮುಖ್ಯವಾಗಿದ್ದು, ಸಂಚುಕೋರರನ್ನು ನ್ಯಾಯದ ವ್ಯಾಪ್ತಿಗೆ ತರಬೇಕು” ಎಂದು ಶ್ವೇತ ಭವನದ ಭದ್ರತಾ ಮಂಡಳಿ ವಕ್ತಾರ ಆಡ್ರೀನ್ ವಾಟ್ಸನ್ ಮೂಲಕ ತಿಳಿಸಿದ್ದಾರೆ.

ಮೇಘಾ ಮನೋಹರ್ ಕಂಪು

Exit mobile version