ಭಾರತದ ಮೊಟ್ಟ ಮೊದಲ ಚಲನಚಿತ್ರ ನಿರ್ಮಾಣ ಮಾಡಿದ ಕೀರ್ತಿಗೆ ಪಾತ್ರರಾದ ವ್ಯಕ್ತಿಯ ರೋಚಕ ಕಥೆ ಇದು!

ದಾದಾ ಸಾಹೇಬ್ ಫಾಲ್ಕೆ(Dada Saheb Phalke) ಎಂದು ಪ್ರಸಿದ್ಧರಾದ, ‘ದುಂಡಿರಾಜ್ ಗೋವಿಂದ ಫಾಲ್ಕೆ’ಯವರು(Dhandiraj Govinda Phalke), ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಪ್ರಖ್ಯಾತರಾಗಿದ್ದಾರೆ.

ಯಾಕೆಂದರೆ ಭಾರತದ ಮೊಟ್ಟ ಮೊದಲ ಚಲನಚಿತ್ರವಾದ ರಾಜಾ ಹರಿಶ್ಚಂದ್ರ(Raja Harishchandra) ಚಿತ್ರವನ್ನು ನಿರ್ಮಾಣ ಮಾಡಿದ ಕೀರ್ತಿ ಇವರದು. ಇವರು ಇಲ್ಲವಾಗಿ ೧೨ ದಶಕಗಳೇ ಕಳೆದರೂ ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ನಕ್ಷತ್ರವಾಗಿ ವಿಜೃಂಭಿಸುತ್ತಿದ್ದಾರೆ. ದಾದ ಸಾಹೇಬ್ ಫಾಲ್ಕೆ ಅವರ ನಿಜವಾದ ಹೆಸರು, ‘ಧುಂಡಿರಾಜ್ ಗೋವಿಂದ ಫಾಲ್ಕೆ’. ಭಾರತದ ಮೊದಲ ಕಥಾಚಿತ್ರ ‘ರಾಜಾ ಹರಿಶ್ಚಂದ್ರ’. ಈ ಕಥಾಚಿತ್ರದ ಪ್ರೀಮಿಯರ್ ಶೋ ಮುಂಬೈನಲ್ಲಿ 1913, ಏಪ್ರಿಲ್ 21ರಂದು ನಡೆಯಿತು.

ಈ ಚಿತ್ರ ಅಧಿಕೃತವಾಗಿ ಥಿಯೇಟರ್ನಲ್ಲಿ ಬಿಡುಗಡೆಯಾಗಿದ್ದು 1913, ಮೇ 3 ರಂದು. ಹರಿಶ್ಚಂದ್ರ ಮತ್ತು ವಿಶ್ವಾಮಿತ್ರರ ಪೌರಾಣಿಕ ಕತೆಯನ್ನು ಆಧರಿಸಿ ತಯಾರಾಗಿದ್ದ ಚಿತ್ರವಾಗಿತ್ತು. ‘ರಾಜಾ ಹರಿಶ್ಚಂದ್ರ’ ತೆರೆಕಾಣುವುದಕ್ಕಿಂತ ಸರಿಸುಮಾರು ಒಂದು ವರ್ಷ ಮುನ್ನ 1912, ಮೇ 18 ರಂದು ರಾಮಚಂದ್ರ ಗೋಪಾಲ ತೋರ್ಣೆ ನಿರ್ದೇಶನದ ‘ಶ್ರೀ ಪುಂಡಲೀಕ’ ಸಿನಿಮಾ ತೆರೆಕಂಡಿತ್ತು. ಆದರೆ ಈ ಚಿತ್ರವನ್ನು ಲಂಡನ್‌ನಲ್ಲಿ ಚಿತ್ರಿಸಲಾಗಿತ್ತು. ಅಲ್ಲದೆ ಚಿತ್ರಕ್ಕೆ ಬ್ರಿಟೀಷ್ ಛಾಯಾಗ್ರಾಹಕ ಕೆಲಸ ಮಾಡಿದ್ದರು. ಜೊತೆಗೆ ಕ್ಯಾಮರಾವನ್ನು ಒಂದೆಡೆ ಫಿಕ್ಸ್‌ ಮಾಡಿ ದೃಶ್ಯಗಳನ್ನ ಸೆರೆಹಿಡಿಯಲಾಗಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ‘ಸತ್ಯ ಹರಿಶ್ಚಂದ್ರ’ ಮೊದಲ ಭಾರತೀಯ ಸಿನಿಮಾ ಎನ್ನುವ ಕೀರ್ತಿಗೆ ಪಾತ್ರವಾಯ್ತು. ನಾಲ್ಕು ರೀಲ್‌ನ ‘ರಾಜಾ ಹರಿಶ್ಚಂದ್ರ’ 40 ನಿಮಿಷ ಅವಧಿಯ ಚಿತ್ರ. ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಏಳು ತಿಂಗಳು 21 ದಿನ. ಮುಂಬಯಿಯ ದಾದರ್ ಮುಖ್ಯರಸ್ತೆಯಲ್ಲಿ ದಾದಾ ಫಾಲ್ಕೆ ಸ್ಟುಡಿಯೋ ನಿರ್ಮಿಸಿದ್ದರು. ರಾಜಾ ರವಿವರ್ಮ ಅವರ ಪೌರಾಣಿಕ ಕಲಾಕೃತಿಗಳನ್ನು ಆಧರಿಸಿ ಸ್ಟುಡಿಯೋದಲ್ಲಿ ಸೆಟ್‌ಗಳನ್ನು ಹಾಕಲಾಗಿತ್ತು. ಮರಾಠಿ ರಂಗಭೂಮಿ ಕಲಾವಿದ ದಾಮೋದರ್ ದಾಬ್ಕೆ ಚಿತ್ರದ ಹರಿಶ್ಚಂದ್ರ ಪಾತ್ರಧಾರಿ.

ಹರಿಶ್ಚಂದ್ರನ ಪತ್ನಿ ಚಂದ್ರಮತಿ ಪಾತ್ರ ನಿರ್ವಹಿಸಲು ಆಗಿನ ಸಾಂಪ್ರದಾಯಿಕ ಸಮಾಜದಲ್ಲಿ ನಟಿಯರು ಒಪ್ಪಲಿಲ್ಲ. ಕೊನೆಗೆ ಪುರುಷನೇ ಈ ಪಾತ್ರ ಮಾಡಬೇಕಾಯ್ತು. ಈ ಪಾತ್ರದಲ್ಲಿ ನಟಿಸಿದ ಅಣ್ಣಾಸಾಹೇಬ್‌ ಸಾಲುಂಕೆ ಅವರು ಮುಂದಿನ ದಿನಗಳಲ್ಲಿ ಸ್ತ್ರೀ ಪಾತ್ರಗಳಿಗೆ ಬೇಡಿಕೆಯ ಕಲಾವಿದರಾದರು! ಈ ಚಿತ್ರ ನಿರ್ಮಾಣಕ್ಕೆ ಹಣದ ಕೊರತೆಯಾದಾಗ ಫಾಲ್ಕೆ ಅವರ ಪತ್ನಿ ಸರಸ್ವತೀಬಾಯಿ, ತಮ್ಮ ಒಡವೆಗಳನ್ನು ಅಡವಿಟ್ಟರು. ಆ ಕಾಲದಲ್ಲಿ ಚಿತ್ರನಿರ್ಮಾಣದ ಕಲೆ ಯಾರಿಗೂ ತಿಳಿದಿರಲಿಲ್ಲ.

ಇದರಿಂದಾಗಿ ರಾಜಾ ಹರಿಶ್ಚಂದ್ರ ಚಿತ್ರದ ಲೇಖನ, ನಿರ್ಮಾಣ ಕಾರ್ಯ, ನಿರ್ದೇಶನ, ಹಾಗೂ ನಟನೆ ಮತ್ತು, ಛಾಯಾಗ್ರಹಣವನ್ನೂ ಕೂಡ ಫಾಲ್ಕೆಯವರೇ ಸಮರ್ಪಕವಾಗಿ ನಿರ್ವಹಿಸಿದ್ದು ವಿಶೇಷ. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ. ಇಡೀ ಚಿತ್ರರಂಗದ ಊಟ, ಉಪಚಾರ ಸರಸ್ವತೀಬಾಯಿಯವರದ್ದು. ಚಿತ್ರದ ಕಾಳಗದ ದೃಶ್ಯ ಚಿತ್ರೀಕರಣಗೊಂಡಿದ್ದು ಸಹಾ,

ಧುಂಡಿರಾಜರ ಮನೆಯಲ್ಲಿಯೇ. ಇಂತಹ ಸಾಧನೆಯ ಕಾರಣಕ್ಕೆ ಇಂದಿಗೂ ಇವರ ಗೌರವಾರ್ಥ ಸಿನಿಮಾ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Exit mobile version