ಭಾರತಕ್ಕೆ ಕೆನಡಾ ಸಾಕ್ಷಿ ಒದಗಿಸಲಿ, ಯಾವ ತನಿಖೆಗೂ ನಾವು ನಿರಾಕರಿಸುವುದಿಲ್ಲ: ಎಸ್​. ಜೈಶಂಕರ್

India: ಖಲಿಸ್ತಾನಿ (Khalistan) ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ನಾವು (let Canada Evidence to India) ಯಾವುದೇ ತನಿಖೆಯನ್ನು ನಿರಕಾರಿಸುವುದಿಲ್ಲ. ಆದರೆ ಭಾರತ ಸರ್ಕಾರದ

ಏಜೆಂಟ್​​​​ಗಳು ​​​ಹರ್ದೀಪ್ ಸಿಂಗ್ ನಿಜ್ಜರ್​​ನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯನ್ನು ನೀಡಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ (S Jaishankar)​ ಅವರು ಹೇಳಿದ್ದಾರೆ.

ಭಾರತ ಮತ್ತು ಕೆನಡಾ ನಡುವಿನ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದು, ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಭಾರತದ ಮೇಲೆ

ಆರೋಪವನ್ನು ಮಾಡಿತ್ತು. ಈ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತವೇ ಈ ಕೆಲಸವನ್ನು ಮಾಡಿದ್ದು, ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಭಾರತವು ಕೂಡ

ನಾವು ಎಲ್ಲದಕ್ಕೂ ಸಿದ್ಧ (let Canada Evidence to India) ಎಂದು ತಿಳಿಸಿತ್ತು.

ಇದೀಗ ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಅವರು ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ನಾವು ಯಾವುದೇ ತನಿಖೆಯನ್ನು ನಿರಕಾರಿಸುವುದಿಲ್ಲ. ಆದರೆ ಭಾರತ

ಸರ್ಕಾರದ ಏಜೆಂಟ್​​​​ಗಳು ​​​ಹರ್ದೀಪ್ ಸಿಂಗ್ ನಿಜ್ಜರ್​​ನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯನ್ನು ನೀಡಬೇಕು ಎಂದು ಹೇಳಿದ್ದಾರೆ.

ಎಸ್​​ ಜೈಶಂಕರ್​​​ ಅವರು ಬ್ರಿಟನ್ (Britain)​​​​ ಪ್ರವಾಸದಲ್ಲಿರುವ ಬ್ರಿಟನ್​​​ನಲ್ಲಿ ನಡೆದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ (Leonel Barber) ಅವರೊಂದಿಗೆ ಮಾತನಾಡಿದ

ಸಂದರ್ಭದಲ್ಲಿ ಭಾರತದ ಮೇಲೆ ಇಂತಹ ಆರೋಪ ಮಾಡುವ ಮುನ್ನ ಸಾಕ್ಷ್ಯಗಳನ್ನು ನೀಡಿ. ನಾವು ಯಾವುದೇ ತನಿಖೆ ನಿರಾಕರಿಸುವುದಿಲ್ಲ. ಇದುವರೆಗೂ ಕೆನಡಾ ಭಾರತಕ್ಕೆ ಈ ಬಗ್ಗೆ ಯಾವುದೇ

ಪುರಾವೆಯನ್ನು ನೀಡಿಲ್ಲ ಎಂದು ಹೇಳಿದರು.

ಖಲಿಸ್ತಾನದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ
ಜೂನ್ (June) 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಮಾಡಲಾಗಿದ್ದು, ನಂತರ ಈ ಹತ್ಯೆಯನ್ನು ಭಾರತದ ಏಜೆಂಟ್​​​ಗಳು

ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸೆಪ್ಟೆಂಬರ್‌ನಲ್ಲಿ ಆರೋಪಿಸಿದರು. ಅಲ್ಲಿಂದ ಭಾರತ ಮತ್ತು ಕೆನಡಾ ಸಂಬಂಧ ಉತ್ತಮವಾಗಿಲ್. ಆದರೆ ಈ ಹಿಂದೆಯೇ

ಭಾರತ ಆತನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿತ್ತು.

ಪ್ರಧಾನಿ ಟ್ರುಡೊ ಅವರ ಆರೋಪಗಳು ದಾಖಲೆರಹಿತ: ಭಾರತ
ಭಾರತವು ಪ್ರಧಾನಿ ಟ್ರುಡೊ ಅವರ ಆರೋಪಗಳನ್ನುನಿರಾಧಾರ ಎಂದು ತಳ್ಳಿಹಾಕಿದ್ದು, ಕೆನಡಾದಲ್ಲಿ (Canada) ಖಲಿಸ್ತಾನ್ ಪರ ಚಳುವಳಿಗಳನ್ನು ಉಲ್ಲೇಖಿಸಿದ ಜೈಶಂಕರ್ ವಾಕ್ ಮತ್ತು ಅಭಿವ್ಯಕ್ತಿ

ಸ್ವಾತಂತ್ರ್ಯವು ಕೆಲವು ಜವಾಬ್ದಾರಿಗಳೊಂದಿಗೆ ಬರುತ್ತದೆ. ಹಾಗೂ ಆ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ತಪ್ಪು ಎಂದು ಹೇಳಿದ್ದಾರೆ.

ಇದನ್ನು ಓದಿ: ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಮೂರು ಕಾಸಿಗೆ ಹರಾಜಾಗಿದೆ : ಕುಮಾರಸ್ವಾಮಿ ವಾಗ್ದಾಳಿ

Exit mobile version