Bengaluru: ಬೇಸಿಗೆಯ ಬಿಸಿಲು ಹೆಚ್ಚುತ್ತಿರುವ ಹೊತ್ತಿನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಕೆಆರ್ಎಸ್ ಸೇರಿದಂತೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿರುವುದರಿಂದ ಅದರ ನೇರ ಪರಿಣಾಮ ಬೆಂಗಳೂರು ನಗರದ ಮೇಲೆ ಬೀರಿದೆ. ಹೀಗಾಗಿ ಜಲಮಂಡಳಿ ಬೆಂಗಳೂರಿನಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳ ಸಮೀಕ್ಷೆ ಮಾಡಿದೆ. ಪ್ರಮುಖವಾಗಿ 257 ಪ್ರದೇಶಗಳಲ್ಲಿ ನೀರಿನ ಕೊರತೆ ಇರುವುದು ಗೊತ್ತಾಗಿದೆ. ಜಲಮಂಡಳಿ ಬಿಡುಗಡೆ ಮಾಡಿರುವ ಬೆಂಗಳೂರಿನಲ್ಲಿ ನೀರಿನ ಕೊರತೆಯಿರುವ ಪ್ರದೇಶಗಳ ಪಟ್ಟಿ ಹೀಗಿದೆ.
ನೀರಿನ ಕೊರತೆ ಇರುವ ಪ್ರದೇಶಗಳು :
ಬೆಂಗಳೂರು ದಕ್ಷಿಣ ವಲಯ
- ಹೆಚ್ಎಸ್ಆರ್ ಲೇಔಟ್
- ಬೊಮ್ಮನಹಳ್ಳಿ (Bommanahalli)
- ಹೊಸಕೆರೆಹಳ್ಳಿ
- ಚಿಕ್ಕಪೇಟೆ
- ಯಲಚೇನಹಳ್ಳಿ
ಬೆಂಗಳೂರು ಪಶ್ಚಿಮ ವಲಯ
- ರಾಜಾಜಿನಗರ 6ನೇ ಬ್ಲಾಕ್
- ಪೀಣ್ಯ (Peenya)
- ಬಾಗಲುಗುಂಟೆ
- ಬಾಪೂಜಿನಗರ
ಬೆಂಗಳೂರು ಪೂರ್ವ ವಲಯ
- ಕೆ.ಆರ್ ಪುರಂ (K R Puram)
- ರಾಮಮೂರ್ತಿನಗರ
- ಮಾರತಹಳ್ಳಿ
ಬೆಂಗಳೂರು ಉತ್ತರ
- ಡಿಜೆ ಹಳ್ಳಿ (DJ Halli)
- ವೈಯಾಲಿಕಾವಲ್
ನೀರಿನ ಕೊರತೆ ಇರುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು ಜಲಮಂಡಳಿ #WaterBoard ಸಿಂಟೆಕ್ಸ್ ವ್ಯವಸ್ಥೆ ಮಾಡಿ ನೀರು ಪೂರೈಕೆಗೆ ಮುಂದಾಗ್ತಿದೆ. ಆದರು ಇಡೀ ನಗರಕ್ಕೆ ನೀರು ಪೂರೈಕೆ ಮಾಡಲು ಜಲಮಂಡಳಿ ಹರಸಾಹಸ ಪಡುತ್ತಿದೆ. ಕೆಆರ್ಎಸ್ನಿಂದ (KRS) ನಿರೀಕ್ಷಿತ ಮಟ್ಟದಲ್ಲಿ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬೇರೆ ನೀರಿನ ಮೂಲಗಳ ನೀರು ಪೂರೈಕೆ ಮಾಡಲು, ಜಲಮಂಡಳಿ ಮುಂದಾಗಿದೆ. ಬೆಂಗಳೂರಿನಲ್ಲೇ ನೀರಿನ ಸಮಸ್ಯೆ ಉಂಟಾಗಿರೋದು ರಾಜ್ಯ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ.