ಪ್ರಾಕೃತಿಕ ವಿಸ್ಮಯ ‘ಲಿವಿಂಗ್ ರೂಟ್ ಬ್ರಿಡ್ಜ್’ : ಈ ಸೇತುವೆ ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ!

Weird : ಸಾಮಾನ್ಯವಾಗಿ ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ವಸ್ತುಗಳನ್ನು ಬಳಸಿ(Living Root Bridge Meghalaya) ಸೇತುವೆಯನ್ನು ನಿರ್ಮಿಸಲಾಗುತ್ತದೆ. ಆದರೆ ಈ ಯಾವ ವಸ್ತುಗಳನ್ನೂ ಬಳಸದೇ,

ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ(Living Root Bridge Meghalaya) ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯದಾದ ಸಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ.

ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗ ನಿರ್ಮಿತ ಸೇತುವೆ – ಲಿವಿಂಗ್ ರೂಟ್ ಬ್ರಿಡ್ಜ್(Living Root Bridge).


‘ಲಿವಿಂಗ್ ರೂಟ್ ಬ್ರಿಡ್ಜ್’ ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ಮೂಲ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು.

ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲಾಗಿತ್ತು.

https://youtu.be/TayW3nHMII8


ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗೆ ಅಡ್ಡವಾಗಿ ಕಟ್ಟಿ, ಚಿಕ್ಕ ಪುಟ್ಟ ಕಾಲುದಾಟುಗಳನ್ನಾಗಿ ನಿರ್ಮಿಸಿಕೊಳ್ಳುತ್ತಿದ್ದರಾದರೂ, ಸರ್ವಕಾಲಿಕ ಮಳೆಯಿಂದುಂಟಾಗುವ ತೇವಾಂಶ-ಆರ್ದ್ರತೆಗೆ ಅವುಗಳು ಬಲುಬೇಗ ನಶಿಸಿ ಹೋಗುತ್ತಿದ್ದವು.

ಇದಕ್ಕೊಂದು ಶಾಶ್ವತ ಪರಿಹಾರವೆಂಬಂತೆ, ಖಾಸೀ ಬುಡಕಟ್ಟು ಜನಾಂಗದವರು, ಪ್ರಕೃತಿಯ ಮೇಲಿನ ಗೌರವ ಮತ್ತು ನಂಬಿಕೆಯಿಂದ ಕಂಡುಕೊಂಡ ಉಪಾಯವೇ ಈ ಲಿವಿಂಗ್ ರೂಟ್ ಬ್ರಿಡ್ಜ್.

ಖಾಸಿ ಮತ್ತು ಜೇನ್ತಿಯಾ ಬೆಟ್ಟಗಳಲ್ಲಿ, ಅಲ್ಲಿನ ಆರ್ದ್ರತೆಗೆ ದಷ್ಟಪುಷ್ಟವಾಗಿ ಬೆಳೆಯುವ ಒಂದು ಜಾತಿಯ ರಬ್ಬರ್ನ ಗಟ್ಟಿಮುಟ್ಟಾದ ಉದ್ದದ ಬೇರುಗಳನ್ನು ಬಳಸಿ, ಸೇತುವೆ ಕಟ್ಟುವ ಅನನ್ಯ ಪ್ರಯತ್ನ ಅಲ್ಲಿನ ಬುಡಕಟ್ಟು ಜನಾಂಗದವರಿಂದ ಪ್ರಾರಂಭವಾಯಿತು.


ಅವರು ಈ ರಬ್ಬರ್ ಮತ್ತು ಆಲದ ಗಿಡಗಳನ್ನು ನದಿ ದಂಡೆಯ ಪಕ್ಕದಲ್ಲಿ ಒಂದಕ್ಕೊಂದು ಸಮೀಪದಲ್ಲಿ ನೆಟ್ಟು ಬೆಳೆಸಲಾರಂಭಿಸಿದರು. ಆ ಸಸಿಗಳು ದೊಡ್ಡದಾಗಿ, ಅವುಗಳಿಂದ ಟಿಸಿಲೊಡೆದ ಬೇರು ಮತ್ತು ಬಿಳಲುಗಳನ್ನು, ಅತ್ಯಂತ ಕುಶಲತೆಯಿಂದ ಹಂತಹಂತವಾಗಿ ಸೇರಿಸಿ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದರು.

ಹೀಗೆ ಬೆಳೆಯುವ ಮೀಟರು ಗಟ್ಟಲೆ ಉದ್ದದ ಬಿಳಲುಗಳನ್ನು ಪ್ರತಿ 4-5 ತಿಂಗಳಿಗೊಮ್ಮೆ ಎಳೆದು ಹುರಿಗೊಳಿಸಿ, ನದಿಗಳಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಕಟ್ಟಿರುತ್ತಿದ್ದ ಮರದ ಅಥವಾ ಬಿದಿರಿನ ಸಂಕೋಲೆಗಳ ಮೇಲೆ ನೈಪುಣ್ಯತೆಯಿಂದ ಹೆಣೆಯುತ್ತಿದ್ದರು.

ಹೀಗೆ, ಮೇಘಾಲಯವು ಅತ್ಯಂತ ಜನಪ್ರಿಯ ಮತ್ತು ಪುರಾತನವಾದ ಸೇತುವೆ ಹೊಂದಿರುವ ತಾಣ ಎಂದು ವಿಖ್ಯಾತಿಯನ್ನು ಪಡೆದಿದೆ.

ಇದನ್ನೂ ಓದಿ : https://vijayatimes.com/sunil-kumar-slams-siddaramaiah/

ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್‌ ಕೆ ಸಂಗ್ಮಾ ಅವರು ಈ ಕುರಿತು ತಮ್ಮ ಟಿಟ್ವರ್‌(Twitter) ಖಾತೆಯಲ್ಲಿ ಈ ಲಿವಿಂಗ್‌ ರೂಟ್‌ ಸೇತುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಮೇಘಾಲಯದ ಸಾಂಸ್ಕೃತಿಕ ಹೆಗ್ಗುರುತು ‘ಬೇರುಗಳ ಸೇತುವೆಗಳು’ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿರುವುದು ಸಂತಸ ಮೂಡಿಸಿದೆ’ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.


ಯುನೆಸ್ಕೊ ಪ್ರಕಾರ, ಈ ನೈಸರ್ಗಿಕವಾದ ಸೇತುವೆಯು ಶತಮಾನಗಳಿಂದ ಸಂಪರ್ಕವನ್ನು ಸಾಧಿಸಲು ಅವಕಾಶ ಮಾಡಿಕೊಡುತ್ತಿದೆ. ಇಲ್ಲಿನ ಸೇತುವೆಗಳು ನೂರಾರು ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ ಮತ್ತು 150 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎನ್ನಲಾಗಿದೆ.

Exit mobile version