Mysore: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪುತ್ರ (Lok Sabha Seat to Sunil Bose) ಸುನಿಲ್ ಬೋಸ್ (Sunil Bose) ಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್
ದೊರೆಯುತ್ತದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ (H C Mahadevappa) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗ ಸುನಿಲ್ ಬೋಸ್ ಕಳೆದ ಅನೇಕ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಮೂರು ಚುನಾವಣೆಗಳಲ್ಲಿ ಪಕ್ಷಕ್ಕಾಗಿ
ಸಾಕಷ್ಟು ಕೆಲಸ ಮಾಡಿದ್ದಾನೆ. ಆದರೆ ಮೂರು ಚುನಾವಣೆಗಳಲ್ಲಿಯೂ ಆತನಿಗೆ ಟಿಕೆಟ್ ಕೈತಪ್ಪಿದೆ. ಆದರೂ ಮುನಿಸಿಕೊಳ್ಳದೆ ಪಕ್ಷದ ಪರ ಕೆಲಸ ಮಾಡಿಕೊಂಡು, ಪಕ್ಷವನ್ನು ಸಂಘಟನೆ ಮಾಡಿಕೊಂಡು ಬಂದಿದ್ದಾರೆ.
ಕಾಂಗ್ರೆಸ್ (Congress) ಪಕ್ಷದ ಪ್ರಾಥಮಿಕ ಸದಸ್ಯತ್ವವೇ ಪಡೆಯದವರು ಇಂದು ಶಾಸಕರಾಗಿರುವ ಸಂದರ್ಭದಲ್ಲಿ ಸುನಿಲ್ ಬೋಸ್ ಮಾಡಿರುವ ಪಕ್ಷ ಸಂಘಟನೆ ಕಾರ್ಯ ಗುರುತಿಸಿ ಲೋಕಸಭೆ ಚುನಾವಣೆ
ಟಿಕೆಟ್ ಏಕೆ ನೀಡಬಾರದು?’ (Lok Sabha Seat to Sunil Bose) ಎಂದು ಪ್ರಶ್ನಿಸಿದ್ದಾರೆ.
ಇನ್ನು ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಹೀಗಾಗಿ ನನ್ನ ಪುತ್ರ ಸುನಿಲ್ ಬೋಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಆದರೆ ಹೈಕಮಾಂಡ್
(High Command) ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ನನ್ನ ಪುತ್ರ ಸಮರ್ಥರಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಗುರುತಿಸಲಿದೆ
ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಅವರ ವಿರುದ್ಧದ ಸಿಬಿಐ ತನಿಖೆ ಆದೇಶ ವಾಪಸ್ ಪಡೆದಿರುವ ಸಚಿವ ಸಂಪುಟದ ತೀರ್ಮಾನವನ್ನು ಸಮರ್ಥಿಸಿಕೊಂಡ
ಅವರು, ಈ ಹಿಂದಿನ ಬಿಜೆಪಿ (BJP) ಸರ್ಕಾರ ರಾಜಕೀಯ ದ್ವೇಷದಿಂದಾಗಿ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಅದೇ ರೀತಿ ರಾಜ್ಯದ ಅಡ್ವೋಕೇಟ್ (Advocate) ಜನರಲ್ ಅವರ ಅಭಿಪ್ರಾಯ
ಪಡೆದಿರಲಿಲ್ಲ ಮತ್ತು ವಿಧಾನಸಭೆಯ ಸ್ಪೀಕರ್ (Speaker) ಅನುಮತಿಯನ್ನೂ ಕೇಳಿರಲಿಲ್ಲ. ಹೀಗಾಗಿಯೇ ಹಿಂದಿನ ಸರ್ಕಾರ ನೀಡಿದ್ದ ಈ ಆದೇಶವನ್ನು ನಮ್ಮ ಸಚಿವ ಸಂಪುಟ ವಾಪಸ್ ಪಡೆದಿದೆ.
ನಮ್ಮ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನದ ಹಿಂದೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ. ನಾವು ಕಾನೂನು ರೀತಿಯಲ್ಲೇ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಇದನ್ನು ಓದಿ: ವಿದ್ಯುತ್ ವ್ಯತ್ಯಯ: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ