Hubballi: ನೇಹಾ ಹಿರೇಮಠ ಹತ್ಯೆಯ ಪ್ರಕರಣ (Neha Hiremath Murder Case) ಮಾಸುವ ಮುನ್ನವೇ (Love Jihad in Hubli) ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ
ಕೇಳಿ ಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಲೈಂಗಿಕವಾಗಿ ಬಳಸಿಕೊಂಡು, ಗರ್ಭಿಣಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ವಿರುದ್ದ ಕಿಡಿಕಾರಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು, ಕಣ್ಣೆದುರೇ ಮೂಲಭೂತವಾದಿ
ಪುಂಡರು ಅಟ್ಟಹಾಸ ಮೆರೆಯುತ್ತಲೇ ಇದ್ದರೂ ಕಾಂಗ್ರೆಸ್ ನಿಷ್ಕ್ರೀಯತೆ ತೋರುತ್ತಿದೆ. ‘ಹುಬ್ಬಳ್ಳಿಯಲ್ಲಿ (Hubballi) ಅಪ್ರಾಪ್ತೆಯನ್ನು ಮುಸ್ಲಿಂ ಯುವಕ ಗರ್ಭಿಣಿಯನ್ನಾಗಿಸಿರುವ ಹೇಯ ಕೃತ್ಯ ವರದಿಯಾಗಿದೆ’.
‘ಕಾಂಗ್ರೆಸ್ ಸರ್ಕಾರ ಇದೆ ಎಂಬ ಧೈರ್ಯ, ಜಿಹಾದಿ ಮನಸ್ಥಿತಿಯ ಕ್ರಿಮಿನಲ್ (Criminals) ಗಳನ್ನು ಉತ್ತೇಜಿಸುತ್ತಿದೆ’ ಎಂಬ ಆತಂಕ ಶಾಂತಿಪ್ರಿಯ ಕರುನಾಡ ಜನತೆಯನ್ನು ಕಾಡುತ್ತಿದೆ.
ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಕಣ್ಣೆದುರೇ ಮೂಲಭೂತವಾದಿ ಪುಂಡರು ಅಟ್ಟಹಾಸ ಮೆರೆಯುತ್ತಲೇ ಇದ್ದರೂ ಓಲೈಕೆ ರಾಜಕಾರಣಕ್ಕೆ ಜೋತುಬಿದ್ದಿರುವ ಕಾಂಗ್ರೆಸ್ ಸರ್ಕಾರ ಉದ್ದೇಶ
ಪೂರ್ವಕ ನಿಷ್ಕ್ರೀಯತೆ ತೋರುತ್ತಿದೆ, ರಾಕ್ಷಸೀ ಪ್ರವೃತ್ತಿ ಮೆರೆಯುತ್ತಿರುವವರ ವಿರುದ್ಧ ಮೆದು ಧೋರಣೆ ಅನುಸರಿಸುತ್ತಿದೆ. ಇದರಿಂದ ಹೆಣ್ಣು ಮಕ್ಕಳ ಮೇಲೆ ನಿರಂತರ ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ.
“ಹೆಣ್ಣು ಹೆತ್ತವರ ಆಕ್ರಂದನ ಅರಣ್ಯರೋಧನವಾಗಿದೆ, ಧೃತರಾಷ್ಟ್ರ ನಡವಳಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರ್ಮಯುದ್ಧದಲ್ಲಿ(ಲೋಕಸಮರ) ಜನ ಪಾಠ ಕಲಿಸಬೇಕಿದೆ ಎಂದಿದ್ದಾರೆ.
ಇನ್ನು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಅವರು, ಸಹೋದರಿ ನೇಹಾ ಪ್ರಕಾರದಲ್ಲಿ ನಡೆದ ದುರ್ಘಟನೆಯನ್ನೇ ಅರಗಿಸಿಕೊಳ್ಳಲಾಗದ ಕನ್ನಡಿಗರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು
ಆಘಾತ ಎದುರಾಗಿದೆ. ಹುಬ್ಬಳ್ಳಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮುಸ್ಲಿಂ (Muslim) ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿ ಮಾಡಿರುವ ಅಮಾನುಷ ಘಟನೆ
ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ (Love Jihad in Hubli) ಹಾವಳಿಗೆ ಮತ್ತೊಂದು ನಿದರ್ಶನವಾಗಿದೆ.
ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ, ತುಷ್ಟೀಕರಣದಿಂದ ರಾಜ್ಯದಲ್ಲಿ ತಾಲಿಬಾನಿ ಸಂಸ್ಕೃತಿ ನಿರ್ಮಾಣವಾಗುತ್ತಿದ್ದು ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಎದುರಾಗಿದೆ. ಹಿಂದೂ
ಹೆಣ್ಣುಮಕ್ಕಳ ಜೀವಕ್ಕೆ ಕಂಟಕವಾಗಿರುವ ಈ ಲವ್ ಜಿಹಾದ್ ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕು, ಗುಪ್ತಚರ ಇಲಾಖೆ ಹಾಗು ಪೊಲೀಸ್ ಇಲಾಖೆಯ ವಿಶೇಷ ತಂಡ ರಚಿಸಿ ಈ ಮತಾಂಧ ರಾಕ್ಷಸರನ್ನು
ಮಟ್ಟಹಾಕಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗು ಗೃಹ ಸಚಿವ ಪರಮೇಶ್ವರ್(Parameshwar) ಅವರನ್ನು ಅಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಹೆಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಮಹಿಳೆ ನಾಪತ್ತೆ, 40 ಕಡೆ ರೇಡ್ ನಡೆಸಿದ ಎಸ್ಐಟಿ