ಮಗನ ವಿಡಿಯೋ ಕಾಲ್‌ ತಾಯಿಯ ಪ್ರಾಣಕ್ಕೆ ಕಂಟಕ

ಬಾಗಲಕೋಟೆ, ನ. 23: ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಬಳಿ ಮನಕಲುಕುವ ಘಟನೆಯೊಂದು ನಡೆದಿದೆ. ಯೋಧನ ಪತ್ನಿಯೊಬ್ಬರು ಬೈಕ್​ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಪುಷ್ಪಲತಾ (35) ಮೃತ ದುರ್ದೈವಿ.

ಇಂದು ಬೆಳಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಾಗಿದ್ದರಿಂದ ಯೋಧ ಶೇಖರಯ್ಯ ವಿಭೂತಿ ನಿನ್ನೆ ಸಂಜೆ ಪತ್ನಿಯನ್ನು ತವರು ಮನೆಗೆ ಬಿಡಲು ಹಿರೆಮಳಗಾವಿ ಗ್ರಾಮಕ್ಕೆ ಹೋಗುತ್ತಿದ್ದರು. ದಂಪತಿ ಬೈಕ್​​​​​ನಲ್ಲಿ ಹೋಗುವ ವೇಳೆ ಮಗನಿಂದ ವಿಡಿಯೋ ಕಾಲ್​ ಬಂದಿತ್ತು. ಈ ವೇಳೆ ಶೇಖರಯ್ಯ ವಿಡಿಯೋ ಕಾಲ್​​ನಲ್ಲಿ ಮಾತಾಡುತ್ತಾ ಹಂಪ್ಸ್​ ಗಮನಿಸದೇ ಚಲಿಸಿದ್ದರಿಂದ ಬೈಕ್ ಮೇಲಕ್ಕೆ ಹಾರಿದೆ. ಆಗ ಶೇಖರಯ್ಯ ಅವರ ಪತ್ನಿ ಪುಷ್ಪಲತಾ ಕೆಳಗೆ ಬಿದ್ದು ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version