ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆ: ರಾಷ್ಟ್ರಪಿತನಿಗೆ ಹಲವು ಗಣ್ಯರಿಂದ ನಮನ

ಹೊಸದಿಲ್ಲಿ, ಜ. 30: ಮಹಾತ್ಮ ಗಾಂಧಿ ಪುಣ್ಯ ತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅರ್ಪಿಸಿದ್ದಾರೆ.

ʻಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನವನ್ನು ಸ್ಮರಿಸುತ್ತಿದ್ದೇವೆ. ಅವರ ಶಾಂತಿ, ಅಹಿಂಸೆ, ಸರಳತೆ, ಪರಿಶುದ್ಧತೆ ಮತ್ತು ನಮ್ರತೆಯ ತತ್ವಗಳಿಗೆ ನಾವು ಬದ್ಧರಾಗಿರಬೇಕು’ ಎಂದು ರಾಮನಾಥ್‌ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ, ‘ಮಹಾತ್ಮ ಗಾಂಧಿಜೀ ಅವರ ಆದರ್ಶಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಈ ಹುತಾತ್ಮರ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ವೀರ ವನಿತೆಯರು ಹಾಗೂ ಯೋಧರನ್ನು ನೆನಪಿಸಿಕೊಳ್ಳೋಣ’ ಎಂದು ಎಂದಿದ್ದಾರೆ.

ಅಂತೆಯೇ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಹುತಾತ್ಮರ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಇತರರು ಭಾಗವಹಿಸಿದ್ದರು. 1948ರ ಜನವರಿ 30ರಂದು ಗಾಂಧಿಜೀ ಅವರನ್ನು ನಾಥೂರಾಮ ಗೋಡ್ಸೆ ಗುಂಡಿಕ್ಕಿ ಕೊಂದಿದ್ದರು.

Exit mobile version