ಪ್ರಿನ್ಸ್‌ ಮಹೇಶ್ ಬಾಬು ನಟನೆಯ ಒಕ್ಕಡು 20 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಚಿತ್ರವನ್ನು ಮರುಬಿಡುಗಡೆಗೊಳಿಸಲು ನಿರ್ಧಾರ!

Okkadu Movie

Andhra Pradesh: ತೆಲುಗು ಚಿತ್ರರಂಗದ ಬೆಣ್ಣೆ ಮುರುಕು, ಪ್ರಿನ್ಸ್‌ ಎಂದೇ ಕರೆಯಲ್ಪಡುವ ನಟ ಮಹೇಶ್‌ ಬಾಬು (Maheshbabu Okkadu Movie Rerelease) ಅವರು,

ಅಭಿನಯಿಸಿದ ಒಕ್ಕಡು ಸಿನಿಮಾ (Okkadu Movie) ೨೦ ವರ್ಷಗಳನ್ನು ಪೂರೈಸಿದ ಹಿನ್ನೆಲೆ ಚಿತ್ರತಂಡ ಮರುಬಿಡುಗಡೆಗೊಳಿಸಲು ಯೋಚಿಸಿದೆ ಎನ್ನಲಾಗಿದೆ. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಐಕಾನಿಕ್ ಚಿತ್ರಗಳಲ್ಲಿ ಒಕ್ಕಡು ಕೂಡ ಒಂದಾಗಿದೆ.

ಈ ಚಿತ್ರವು ಎಷ್ಟು ಯಶಸ್ವಿಯಾಗಿ, ದಾಖಲೆ ನಿರ್ಮಿಸಿತು ಎಂಬುದನ್ನು ತಿಳಿಯುವುದಾದರೆ, ಬಾಕ್ಸ್‌ ಆಫೀಸ್‌(Box Office) ಧೂಳಿಪಟ ಮಾಡಿದ ಒಕ್ಕಡು,

ಹಲವು ಭಾಷೆಗಳಲ್ಲಿ ರೀಮೇಕ್ ಆಗಿ ಗೆಲುವನ್ನು ಸಾಧಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇನ್ನು (Maheshbabu Okkadu Movie Rerelease) ೨೦ ವರ್ಷಗಳನ್ನು ಪೂರೈಸಿದ ಒಕ್ಕಡು ಚಿತ್ರದ ಸಂಭ್ರಮವನ್ನು ಆಚರಿಸಲು,

ಚಿತ್ರದ ನಿರ್ಮಾಪಕ ಎಂ.ಎಸ್‌ ರಾಜು (M.S Raju), ಡಿಸೆಂಬರ್ 19 ರಂದು ಮರು ಬಿಡುಗಡೆ ಬಗ್ಗೆ ಮಾತನಾಡಿ,೨೦೨೩ರ ಜನವರಿಯಲ್ಲಿ ಒಕ್ಕಡು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ,

ಎಂದು ಮಹೇಶ್‌ ಬಾಬು ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಜನವರಿ 15 ರಂದು ಚಿತ್ರವು 20ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ, ಈ ವಿಶೇಷ ಸಂದರ್ಭವನ್ನು ಆಚರಿಸಲು ಅಭಿಮಾನಿಗಳಿಗೆ ಚಿತ್ರವನ್ನು ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ಪ್ರದರ್ಶಿಸಲು ತಯಾರಕರು ನಿರ್ಧರಿಸಿದ್ದಾರೆ.

http://ಇದನ್ನೂ ನೋಡಿ:https://fb.watch/hxlS7UCah0/

ನಿರ್ಮಾಪಕ ಎಂ.ಎಸ್.ರಾಜು ಪ್ರಕಾರ, ಒಕ್ಕಡು ಚಿತ್ರವು ಜನವರಿ 7 2023 ರಂದು ಥಿಯೇಟರ್‌ಗಳಲ್ಲಿ ಮರು-ಬಿಡುಗಡೆಯಾಗಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮಹೇಶ್ ಬಾಬು ಅವರು ತಮ್ಮ ತಂದೆ ಸೂಪರ್‌ಸ್ಟಾರ್ ಕೃಷ್ಣ ಅವರ ನಿಧನದ ಕಾರಣ ಯಾವ ಚಿತ್ರೀಕರಣದಲ್ಲೂ ಭಾಗಿಯಾಗದೆ ವಿಶ್ರಾಂತಿಯಲ್ಲಿದ್ದಾರೆ.

ಶೀಘ್ರದಲ್ಲೇ ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರದ ಕೆಲಸವನ್ನು ಪುನರಾರಂಭಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಮಹೇಶ್ ಬಾಬು ಅವರ ಒಕ್ಕಡು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಸಂಭ್ರಮಿಸಲು ವಿಶೇಷ ಕಾರಣವಾಗಿದೆ ಎಂದೇ ಹೇಳಬಹುದು.

ಗುಣಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಒಕ್ಕಡು ಒಂದು ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಮಹೇಶ್ ಬಾಬು, ಭೂಮಿಕಾ ಚಾವ್ಲಾ (Bhumika Chavla) ಮತ್ತು ಪ್ರಕಾಶ್ ರಾಜ್ (Prakash Raj) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಈ ಚಿತ್ರವು 2003 ರಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಒಕ್ಕಡು ಚಿತ್ರವು ಅನೇಕ ವಿಭಾಗಗಳಲ್ಲಿ ಎಂಟು ನಂದಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರವು ನಟ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಸಾಕಷ್ಟು ಹೆಸರು, ಪ್ರಶಸ್ತಿಯನ್ನು ತಂದುಕೊಟ್ಟಿದೆ.

http://ಇದನ್ನೂ ಓದಿ:https://vijayatimes.com/cbi-raid-on-dkc-2/

ಒಕ್ಕಡು ತಮಿಳಿನಲ್ಲಿ ನಟ ದಳಪತಿ ವಿಜಯ್ (Actor Dalapathi Vijay), ನಟಿ ತ್ರಿಷಾ (Actress Trisha) ಮತ್ತು ಪ್ರಕಾಶ್ ರಾಜ್ ಅವರೊಂದಿಗೆ ಗಿಲ್ಲಿ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು.

ಈ ಚಿತ್ರವು ಕನ್ನಡ ಭಾಷೆಯಲ್ಲಿ ಅಜಯ್, ಬಂಗಾಳಿಯಲ್ಲಿ ಜೋರ್, ಹಿಂದಿಯಲ್ಲಿ ತೇವರ್, ಒಡಿಯಾದಲ್ಲಿ ಮೇಟ್ ಆನಿಡೆಲಾ ಲಖೆ ಫಗುನಾ ಎಂಬ ಹೆಸರಿನಲ್ಲಿ ಡಬ್‌ ಆಗಿ ಬಿಡುಗಡೆಗೊಂಡು ಯಶಸ್ವಿಯಾಯಿತು.
Exit mobile version