ಹಲ್ಲುಜ್ಜುವಾಗ ಈ ತಪ್ಪುಗಳನ್ನು ಮಾಡುವುದು ಅನಾರೋಗ್ಯಕ್ಕೆ ದಾರಿಮಾಡಿಕೊಟ್ಟಂತೆ

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲ್ಲುಜ್ಜುವುದು ಬಹಳ ಮುಖ್ಯ. ಉತ್ತಮ ಬಾಯಿಯ ನೈರ್ಮಲ್ಯ ಮತ್ತು ಸರಿಯಾದ ಹಲ್ಲಿನ ಆರೈಕೆ ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನಿಯಮಿತವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಆದರೆ ಹಲ್ಲುಜ್ಜುವಾಗ ನೀವು ಮಾಡುವ ಈ ಸಾಮಾನ್ಯ ತಪ್ಪುಗಳನ್ನು ಮಾಡದಿರುವುದು ಉತ್ತಮ.

ಹಲ್ಲುಜ್ಜುವಾಗ ಮಾಡುವ ಸಾಮಾನ್ಯ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಗಟ್ಟಿಯಾಗಿ ಉಜ್ಜುವುದು:
ತುಂಬಾ ಕಠಿಣವಾಗಿ ಅಥವಾ ಗಟ್ಟಿಯಾಗಿ ಹಲ್ಲುಜ್ಜುವುದು ನಿಮ್ಮ ದಂತಕವಚವನ್ನು ದುರ್ಬಲಗೊಳಿಸುತ್ತದೆ ಮತ್ತು ಕಾಲಾನಂತರದಲ್ಲಿ ವಸಡನ್ನು ಸಡಿಲಗೊಳ್ಳಲು ಕಾರಣವಾಗುವುದು. ಮೃದುವಾದ ಬ್ರಷ್ ಅನ್ನು ಯಾವಾಗಲೂ ಆಯ್ಕೆ ಮಾಡಿಕೊಳ್ಳಿ. ಇದರಿಂದ ಒಂದು ವೇಳೆ ಗಟ್ಟಿಯಾಗಿ ಹಲ್ಲುಜ್ಜಿದರೂ ರಕ್ತಸ್ರಾವವಾಗುವುದಿಲ್ಲ.

ಬ್ರಷ್ ಬದಲಾಯಿಸದೇ ಇರುವುದು:
ನೀವು ಹೊಸ ಬ್ರಷ್ ಕೊಂಡು ತುಂಬಾ ಸಮಯಗಳು ಕಳೆದಿದ್ದರೆ ಅಥವಾ ಬ್ರಷ್ ನ ಹಲ್ಲುಗಳು ಬಿರುಕು ಬಿಡಲು ಪ್ರಾರಂಭವಾಗಿದ್ದರೆ, ನೀವು ಬ್ರಷ್ ಬದಲಾಯಿಸಬೇಕು. ಅದೇ ಬ್ರಷ್ ನಿಂದ ಹಲ್ಲುಜ್ಜುತ್ತಿದ್ದರೆ ನಿಮ್ಮ ಹಲ್ಲು ಹಾಗೂ ವಸಡಿಗೂ ಸಮಸ್ಯೆಯಾಗುವುದು. ನಿಮ್ಮ ಹಲ್ಲುಜ್ಜುವ ಬ್ರಷ್ 3 ತಿಂಗಳಿಗೊಮ್ಮೆ ಬದಲಾಯಿಸಿ, ಹೊಸ ಟೂತ್ ಬ್ರಷ್ ಖರೀದಿಸಲು ದಂತವೈದ್ಯರು ಸಲಹೆ ನೀಡುತ್ತಾರೆ.

ಹೆಚ್ಚು ಕಾಲ ಹಲ್ಲುಜ್ಜದೇ ಇರುವುದು:
ನಮ್ಮಲ್ಲಿ ಕೆಲವರಿದ್ದಾರೆ, ಕೇವಲ ಹತ್ತೇ ಸೆಕೆಂಡಿನಲ್ಲಿ ಹಲ್ಲುಜ್ಜಿಕೊಂಡು ಬರುತ್ತಾರೆ. ಇದು ತಪ್ಪು. ನಿಮ್ಮ ಹಲ್ಲುಗಳನ್ನು ಕನಿಷ್ಠ ಎರಡು ಮೂರು ನಿಮಿಷಗಳ ಕಾಲ ಆದರೂ ಉಜ್ಜಲು ಸೂಚಿಸಲಾಗುತ್ತದೆ. ಹೆಚ್ಚು ಕಾಲು ಹಲ್ಲುಗಳನ್ನು ಹಲ್ಲುಜ್ಜುವುದರಿಂದ ಎಲ್ಲಾ ರೋಗಾಣುಗಳನ್ನು ತೆಗೆದುಹಾಕಬಹುದು. ಜೊತೆಗೆ ಇದು ನಿಮ್ಮ ಬಾಯಿ ಸರಿಯಾಗಿ ಸ್ವಚ್ಛವಾಗಿರುವುದನ್ನು ಖಾತ್ರಿಗೊಳಿಸುವುದು.

ಆಗಾಗ ಹಲ್ಲುಜ್ಜುವುದು:
ತಾತ್ತ್ವಿಕವಾಗಿ, ನೀವು ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಹಲ್ಲುಜ್ಜಬಾರದು. ನೀವು ಬೆಳಿಗ್ಗೆ ಒಮ್ಮೆ ಮತ್ತು ಮಲಗುವ ಮೊದಲು ಹಲ್ಲುಜ್ಜಬೇಕು. ಇದು ಸರಿಯಾದ ಹಲ್ಲಿನ ನೈರ್ಮಲ್ಯವನ್ನು ಕಾಪಾಡಲು ಸಹಾಯವಾಗುವುದು. ಹೆಚ್ಚು ಬಾರಿ ಹಲ್ಲುಜ್ಜುವುದು ನಿಮ್ಮ ಒಸಡುಗಳು ಮತ್ತು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ.

ಬಾಯಿಯ ಒಳಗಿನ ಭಾಗ ನಿರ್ಲಕ್ಷಿಸುವುದು:
ಕೇವಲ ಹಲ್ಲುಗಳ ಹೊರ ಮೇಲ್ಮೈಯನ್ನು ಬ್ರಷ್ ಮಾಡುವುದಷ್ಟೇ ಸಾಕಾಗದು. ಒಳಗಿನ ಮೇಲ್ಮೈಯನ್ನು ಸಹ ನೀವು ಸ್ವಚ್ಛಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅದು ಅಲ್ಲಿ ರೋಗಾಣುಗಳು ಸಂಗ್ರಹವಾಗಿರುತ್ತದೆ. ನಿಮ್ಮ ಹಲ್ಲುಗಳನ್ನು ಎಲ್ಲಾ ಕಡೆಯಿಂದ ಮತ್ತು ಎಲ್ಲಾ ಮೇಲ್ಮೈಗಳಲ್ಲಿ ಸರಿಯಾಗಿ ಸ್ವಚ್ಛಗೊಳಿಸಬೇಕು, ಗೋಚರಿಸದ ಹಲ್ಲುಗಳನ್ನು ಸಹ ಉಜ್ಜಬೇಕು.

Exit mobile version