ಸಕ್ಕರೆನಾಡಲ್ಲಿ ತ್ರಿಕೋನ ಸ್ಪರ್ಧೆ ;  ಮಂಡ್ಯದಲ್ಲಿ ಗದ್ದುಗೆ ಏರುವವರು ಯಾರು..?

Mandya : ಸಕ್ಕರೆನಾಡು ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ನಾಲ್ಕು ದಶಕಗಳಿಂದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ ಇದೀಗ (Mandya Assembly Constituency) ಕೇಸರಿಪಡೆ ಸಕ್ಕರೆನಾಡಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.

ಹಳೇ ಮೈಸೂರು (Mysore) ಭಾಗದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ (BJP) ಈ ಭಾಗದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿದೆ.

ಹೀಗಾಗಿ  ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷವನ್ನು ಎದುರಿಸಲು ಪ್ರಬಲ ಅಭ್ಯರ್ಥಿಗಳನ್ನೇ (Mandya Assembly Constituency) ಈ ಬಾರಿ ಬಿಜೆಪಿ ಕಣಕ್ಕಿಳಿಸಿದೆ.

 ಹೀಗಾಗಿ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ (Mandya Assembly Constituency) ಜೆಡಿಎಸ್‌ಗೆ ಹಾಲಿ ಶಾಸಕ ಶ್ರೀನಿವಾಸ್‌ (Srinivas) ಅವರ ಬಂಡಾಯ ದೊಡ್ಡ ತಲೆನೋವಾಗಿದೆ.

ಇನ್ನೊಂದೆಡೆ ಮದ್ದೂರಿನಲ್ಲಿ ಜೆಡಿಎಸ್‌ ಹಾಲಿ ಶಾಸಕ ಡಿ.ಸಿ.ತಮ್ಮಣ್ಣನವರು (MLA D.C. Tammanna) ಈ ಬಾರಿ ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಬೇಕಾಗಿದೆ.

ಇದನ್ನೂ ಓದಿ : https://vijayatimes.com/himanta-biswa-sharma-statement/

ಮಳವಳ್ಳಿಯಲ್ಲಿಯೂ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ತೀವ್ರ ಸ್ಪರ್ಧೆ ವ್ಯಕ್ತವಾಗುತ್ತಿದ್ದು, ಹಾಲಿ ಜೆಡಿಎಸ್‌ ಶಾಸಕ ಅನ್ನದಾನಿ ಗೆಲುವು ಕಷ್ಟಕರ ಎನ್ನಲಾಗುತ್ತಿದೆ.

ಇನ್ನೊಂದೆಡೆ ಶ್ರೀರಂಗಪಟ್ಟಣದಲ್ಲಿ (Srirangapatna) ರವೀಂದ್ರ ಶ್ರೀಕಂಠಯ್ಯ (Ravindra Srikanthaiah) ಪ್ರಬಲ ಅಭ್ಯರ್ಥಿಯಾಗಿದ್ದರೂ,

ಈ ಬಾರಿ ಇಲ್ಲಿ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ್‌ (BJP candidate Satchidanand) ಅವರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. 

ನಾಗಮಂಗಲದಲ್ಲಿ ಮಾತ್ರ ಹಾಲಿ ಜೆಡಿಎಸ್‌ ಶಾಸಕ ಸುರೇಶ್‌ಗೌಡ (JDS MLA Suresh Gowda) ಮತ್ತು ಕಾಂಗ್ರೆಸ್‌ನ ಚಲುವರಾಯಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ (Melukote Assembly Constituency) ಮಾತ್ರ ಜೆಡಿಎಸ್‌ನ

ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ರೈತಸಂಘ-ಕಾಂಗ್ರೆಸ್‌ಬೆಂಬಲಿತ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್‌ಪುಟ್ಟಣ್ಣ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಆದರೆ ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು ಕ್ಷೇತ್ರದ  ಮೇಲೆ ಪ್ರಬಲ ಹಿಡಿತ ಹೊಂದಿರುವುದರಿಂದ ದರ್ಶನ್‌ಪುಟ್ಟಣ್ಣಯ್ಯನವ ಗೆಲುವು ಕಷ್ಟಕರ ಎನ್ನಲಾಗುತ್ತಿದೆ.

ಸದ್ಯ ಮೇಲುಕೋಟೆ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರಗಳನ್ನು (Nagamangala Assembly Constituency) ಹೊರತುಪಡಿಸಿ,

ಮಂಡ್ಯದ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ – ಕಾಂಗ್ರೆಸ್‌ – ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಎರಡು ಕ್ಷೇತ್ರಗಳಲ್ಲಾದರೂ ಗೆಲುವು ಸಾಧಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಸಂಸದೆ ಸುಮಲತಾ (Sumalatha) ಅವರು, ಸಾಕಷ್ಟು ಪ್ರಚಾರ ನಡೆಸುತ್ತಿದ್ದಾರೆ.

ಸುಮಲತಾ ಬಿಜೆಪಿ ಪರವಾಗಿ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಅಭ್ಯರ್ಥಿಗಳಿಗೆ ಒಂದಷ್ಟು ಬಲ ತಂದುಕೊಟ್ಟಿದೆ.

Exit mobile version