Guwahati: ಮಣಿಪುರದಲ್ಲಿ (Manipura) ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿರುವ 87 ಮಂದಿ ಕುಕಿ-ಝೋ ಸಮುದಾಯದ ಸಂತ್ರಸ್ತರ ಮೃತದೇಹಗಳನ್ನು ಚುರಚಂನಪುರ ಜಿಲ್ಲೆಯಲ್ಲಿ ಬುಧವಾರ (ಡಿ.21) ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ಕುಕಿ-ಝೋ (Cookie-Zo) ಹುತಾತ್ಮರ ಸ್ಮಶಾನದಲ್ಲಿ ಈ ಸಂಸ್ಕಾರ ಕಾರ್ಯವನ್ನು ಕ್ರಿಶ್ಚಿಯನ್ (Christian) ವಿಧಿವಿಧಾನಗಳಿಗೆ ಅನುಸಾರವಾಗಿ ಮತ್ತು ಗ್ರಾಮ ರಕ್ಷಣಾ ಸ್ವಯಂ ಸೇವಕರ ಗೌರವದ ಮೂಲಕ ನಡೆಸಲಾಯಿತು. ಇದಕ್ಕೆ ಮುನ್ನ ತುಬಾಂಗ್ ನಲ್ಲಿ ಸಭೆ ನಡೆಯಿತು.
ಈ ಅಂತ್ಯಸಂಸ್ಕಾರ (Funeral)ದಲ್ಲಿ ಸಾವಿರಾರು ಮಂದಿ ಸಂತ್ರಸ್ತರ ಕುಟುಂಬಸ್ಥರು ಪಾಲ್ಗೊಂಡಿದ್ದು, ಹಲವು ಭಾವನಾತ್ಮಕ ಕ್ಷಣಗಳು ಕಂಡುಬಂದವು. ಶವಪೆಟ್ಟಿಗೆಯನ್ನು ಸಾಂಪ್ರದಾಯಿಕವಾಗಿ ಶಾಲುಗಳಿಂದ ಮುಚ್ಚಿ, ಗೋರಿಗಳಲ್ಲಿ ಇಡಲಾಯಿತು.

ಇದೀಗ ಮೃತಪಟ್ಟವರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟ ನಡೆಯಬೇಕಿದೆ ಮತ್ತು ಕುಕಿ-ಝೋ ಜನರಿಗೆ ಪ್ರತ್ಯೇಕ ಆಡಳಿತದ ಬೇಡಿಕೆ ಮುಂದುವರಿಯಲಿದೆ” ಎಂದು ಮಾನವಹಕ್ಕುಗಳಿಗಾಗಿ ಇರುವ ಕುಕಿ ಮಹಿಳಾ ಸಂಘಟನೆಯ ಅಧ್ಯಕ್ಷೆ ನೈನೇಕಿಮ್ (Nainekim) ಹೇಳಿದ್ದಾರೆ. ನಮ್ಮ ಹಲವು ಮಂದಿ ಸಹೋದರ ಸಹೋದರಿಯರ ಅಂತ್ಯಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ನಡೆಸುವ ಮೂಲಕ ಇದೀಗ ನಿರಾಳರಾಗಿದ್ದೇವೆ.
ಆಪ್ತರನ್ನು ಕಳೆದುಕೊಂಡಿರುವ ಕುಟುಂಬ ಸದ್ಯಸರು ಸುಧೀರ್ಘ ಅವಧಿಯವರೆಗೆ ಕಾಯಬೇಕಾಗಿದೆ. ಈ ಅಂತ್ಯ ಸಂಸ್ಕಾರವು ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆದಿದ್ದು, ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಫೆಬ್ರುವರಿ 18ರವರೆಗೆ ಕರ್ಫ್ಯೂ (Curfew) ಹೇರಲಾಗಿದೆ. ಕುಕಿ ಮತ್ತು ಝೋಮಿ ನಿವಾಸಿಗಳ ನಡುವೆ ನಡೆದ ಸಂಘರ್ಷದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಭವ್ಯಶ್ರೀ ಆರ್ ಜೆ