ಮನುಷ್ಯನ ಮುಖವಾಡ ಕಳಚಿದ ಹೊಸತಂಡದ ಹೊಸಕಥೆ

ಮುಖವಾಡ ಇಲ್ಲದವನು ೮೪ ಫೈವು ಸ್ಟಾರ್ .ಹೊಸ ತಂಡದ ಹೊಸ ಸಿನಿಮಾ. ಈಗಾಗಲೇ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದೆ .ಈ ಸಿನಿಮಾ ಮನುಷ್ಯನ ಮುಖವಾಡವನ್ನು ತೆರೆಯುವಂತೆ ಮಾಡಿದೆ .ಮಾಸ್ , ಕಾಮಿಡಿ ಸಿನಿಮಾಗಳ ನಡುವೆ ಮುಖವಾಡ ಇಲ್ಲದವನು ಅನ್ನೋ ಆಧ್ಯಾತ್ಮಿಕತೆಯನ್ನು ಹೈಲೇಟ್ ಮಾಡೋ ಈ ಚಿತ್ರ ಹೆಣ್ಣಿನ ಸೌಂದರ್ಯ ಗಂಡಿನ ದೌರ್ಬಲ್ಯಕ್ಕೆ ಕಾರಣವಾಗುತ್ತಾ ? ಹಣಕ್ಕಾಗಿ ಮಾನವೀಯತೆ ಮರೆತಿರೋ ಹೆಣ್ಣು ಲೌಕಿಕತೆಗೆ ಒಳಗಾಗೋದು ಹೇಗೆ ಅನ್ನೋದೆ ಚಿತ್ರದ ಹೈಲೆಟ್ .ಅಂದಹಾಗೆ ಈ ಸಿನಿಮಾ ಎಲ್ಲಾ ಚಿತ್ರಗಳಿಗಿಂತ ಸ್ವಲ್ಪ ಡಿಫರೆಂಟ್ ಆಗಿದ್ದು ಇಡೀ ಸಿನಿಮಾದ ಕಥೆ ಕಾಡಿನ ಮಧ್ಯೆಯೇ ಸಾಗುತ್ತದೆ. ಜೊತೆಗೆ ಎರಡು ಮುಖಗಳ ಅನಾವರಣ ಈ ಚಿತ್ರದಲ್ಲಿ ನಿರ್ದಶಕರು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಟ್ಟಿದ್ದಾರೆ ..

ಒಂದು ಪುಸ್ತಕದ ಸುತ್ತ ನಡೆಯೋ ಈ ಕಥೆ ಕಾಮ , ಕ್ರೋದ ಮದ ಮತ್ಸರ ಹೆಣ್ಣು, ಹೊನ್ನಿನ ಆಸೆಗೆ ಮನುಷ್ಯ ಯಾವೆಲ್ಲ ಕೃತ್ಯಗಳನ್ನು ಮಾಡುತ್ತಾನೆಂದು ಮುಖವಾಡ ಇಲ್ಲದವನು ಚಿತ್ರದಲ್ಲಿ ವಾಸ್ತವಿಕವಾಗಿ ತೋರಿಸಿಕೊಟ್ಟಿದ್ದಾರೆ .ಇದರ ಜೊತೆಯಲ್ಲಿ ಭಂಗಿ ಅನ್ನೋ ಪದವನ್ನು ಹೆಚ್ಚಾಗಿ ಚಿತ್ರದಲ್ಲಿ ಹೈಲೆಟ್ ಮಾಡಿದ್ದು ಸಾಧು ಸಂತರ ಮಾತುಗಳೇ ಹೆಚ್ಚಾಗಿ ಚಿತ್ರೀಕರಿಸಿದ್ದು ಆದ್ಯಾತ್ಮವನ್ನು ಹೆಚ್ಚಾಗಿ ಬಣ್ಣಿಸಲಾಗಿದೆ .

ಮುಖವಾಡ ಇಲ್ಲದವನು ಸಿನಿಮಾವನ್ನು ಶಿವಕುಮಾರ್ ಕಡೂರ್ ನಿರ್ದೇಶನ ಮಾಡಿದ್ದು ನಾಯಕ ನಟನ ಪಾತ್ರಕ್ಕೆ ಶಿವಕುಮಾರ್ ಬಣ್ಣ ಹಚ್ಚಿದ್ದಾರೆ .. ಇಡೀ ಚಿತ್ರದಲ್ಲಿ ನಾಯಕ ಪಾತ್ರಮಾತ್ರ ವಿಶೇಷವಾಗಿ ಕಂಡುಬಂದಿದೆ.

Exit mobile version