ಮಾಸ್ಕ್ ಧರಿಸಿ ಇಲ್ಲವೇ ಕೊರೊನಾ ವಾರಿಯರ್ಸ್‌ ಆಗಿ

ಗಾಂಧಿನಗರ, ಡಿ. 02: ಮಾಸ್ಕ್‌ ಧರಿಸದವರಿಗೆ ಕೋವಿಡ್‌ ಕೇಂದ್ರಗಳಲ್ಲಿ ಕೋರೊನಾ ಸೋಂಕಿತರ ಸೇವೆ ಮಾಡುವ ಶಿಕ್ಷೆ ವಿಧಿಸುವಂತೆ ಗುಜರಾತ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೋವಿಡ್‌ ಆರೈಕೆ ಕೇಂದ್ರದಲ್ಲಿ ಇಂಥವರಿಗೆ ಕಡ್ಡಾಯ ಸೇವೆ ವಿಧಿಸುವ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಹಿಂಜರಿಕೆಯಿದೆ ಎಂದು ಹೇಳಿದ ನ್ಯಾಯಾಲಯ ಅಂತಿಮವಾಗಿ ಈ ಸೇವಾ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದೆ. ಈ ಪರಸ್ತಾಪವನ್ನು ಅನುಷ್ಠಾನಕ್ಕೆ ತರಲು ಆಸಕ್ತಿಯಿದೆ. ಆದರೆ ಅದು ಸುಲಭವಲ್ಲ ಎಂದು ರಾಜ್ಯ ಸರ್ಕಾರ ಪ್ರತ್ಯುತ್ತರ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಮತ್ತು ನ್ಯಾಯಮೂತಿF ಜೆ. ಬಿ ಪಾರ್ಡಿವಾಲಾ ಅವರಿದ್ದ ವಿಭಾಗೀಯ ಪೀಠವು ಈ ಕುರಿತ ಸಮರ್ಪಕ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಜ್ಯ ಸರ್ಕಾರವು ಹೊರಡಿಸುವ ನಿರ್ದೇಶನದಲ್ಲಿ ಮಾಸ್ಕ್‌ ಬಳಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಕೋವಿಡ್‌ ಸುರಕ್ಷಾ ಶಿಷ್ಟಾಚಾರಗಳ ಕಡ್ಡಾಯ ಪಾಲನೆಯ ವಿಚಾರಗಳ ಉಲ್ಲೇಖವಿರಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಡೆಸೆಂಬರ್‌ 24ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯವು ಅಷ್ಟರೊಳಗೆ ಈ ಕುರಿತ ಕಾರ್ಯಸಾಧ್ಯತೆ ವರದಿ ಸಲ್ಲಿಸಲು ನಿರ್ದೇಶನ ನೀಡಿತು.

Exit mobile version