ಮದುರೈ: ಕೊರನಾದಿಂದ ಆಹಾರ ಮಳಿಗೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿರುವ ವಿಚಾರ ಎಲ್ಲರಿಗೂ ತಿಳಿದ ವಿಷಯ. ಇದೀಗ ತಮಿಳುನಾಡು ಮದುರೈನ ರೆಸ್ಟೋರೆಂಟ್ ಒಂದರಲ್ಲಿ ಕೊರೊನಾವನ್ನೇ ಸಾಧನವಾಗಿ ಮಾಡಿಕೊಂಡು ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ “ಮಾಸ್ಕ್ ಪರೋಟ” ತಯಾರಿಸಲಾಗುತ್ತಿದೆ.
ನಗರದಾದ್ಯಂತ 12 ಶಾಖೆಗಳನ್ನು ಹೊಂದಿರುವ ಹೋಟೆಲ್ ಟೆಂಪಲ್ ಸಿಟಿ ಮಂಗಳವಾರ ಸಂಜೆಯಿಂದ ಸರ್ಜಿಕಲ್ ಮಾಸ್ಕ್ ಅನ್ನು ಹೋಲುವ “ಮಾಸ್ಕ್ ಪರೋಟಾ”ವನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದೆ. ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಇಬ್ಬರು ಪರೋಟಾ ಮಾಸ್ಟರ್ಸ್ – ಮುನ್ನಾ ಮತ್ತು ಮಧುರೈನ ಒಥಕಡೈನ ಎಸ್ ಸತೀಶ್ ಬಾಬು ಅವರು ಮಂಗಳವಾರದಂದು ಈ ವಿಶೇಷ “ಮಾಸ್ಕ್ ಪರೋಟಾ” ತಯಾರಿಸಿದ್ದಾರೆ. ಈ ಪರೋಟ ಚಿತ್ರ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎರಡು ಮಾಸ್ಕ್ ಪರೋಟಾ ಬೆಲೆ 50 ರೂ ಇದ್ದು, ಡಾ.ಎಂ.ಜಿ.ಆರ್ ಬಸ್ ನಿಲ್ದಾಣದ ಎದುರು ಮಟ್ಟುತವಾಣಿಯಲ್ಲಿರುವ ಹೋಟೆಲ್ನ ಮೊದಲ ಶಾಖೆಯಲ್ಲಿ ಈ ಮಾಸ್ಕ್ ಪರೋಟಾ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಲ್ಲು ಈ ಪರೋಟ ಲಭ್ಯವಿರಲಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.