New Delhi: ಮೊನ್ನೆ(ಡಿ.13) ದೆಹಲಿಯ ಸಂಸತ್ ಭವನದಲ್ಲಿ ಭದ್ರತಾ ಉಲ್ಲಂಘನೆ ಮಾಡುವ ಮೂಲಕ (Mastermind Lalit Jha Arrested) ದೇಶವನ್ನು ತಲ್ಲಣಗೊಳಿಸಿದ್ದ ಸ್ಮೋಕ್
ಬಾಂಬ್ (Smoke Bomb) ದಾಳಿಯ ಪ್ರಕರಣದ ಮಾಸ್ಟರ್ ಮೈಂಡ್ ದಿಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಕೋಲ್ಕತಾದಲ್ಲಿ ಶಿಕ್ಷಕನಾಗಿರುವ ಲಲಿತ್ ಝಾನನ್ನು (Lalit Jha) ಗುರುವಾರ ರಾತ್ರಿ
ಬಂಧಿಸಲಾಗಿದ್ದು, ಆತನನ್ನು ಬಂಧಿಸಿದ ಹೊಸದಿಲ್ಲಿ ಜಿಲ್ಲಾ ಪೊಲೀಸರು, ಬಳಿಕ (Mastermind Lalit Jha Arrested) ವಿಶೇಷ ಘಟಕಕ್ಕೆ ಹಸ್ತಾಂತರಿಸಿದ್ದಾರೆ.
ನಾಪತ್ತೆಯಾಗಿದ್ದ ಈತನನ್ನು ತೀವ್ರ ಶೋಧದ ಬಳಿಕ ದಿಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದು, ಇದರಿಂದಾಗಿ ಸಂಸತ್ ದಾಳಿಯ ಎಲ್ಲ ಆರೋಪಿಗಳು ಸೆರೆ ಸಿಕ್ಕಂತಾಗಿದೆ. ಬುಧವಾರ ದಾಳಿಗೂ ಮುನ್ನ
ಎಲ್ಲ ನಾಲ್ವರು ಆರೋಪಿಗಳಿಂದ ಮೊಬೈಲ್ಗಳನ್ನು (Mobile) ಪಡೆದುಕೊಂಡಿದ್ದ ಲಲಿತ್, ಬಳಿಕ ಸಂಸತ್ತಿನ ಹೊರಗೆ ನೀಲಂ ಮ್ತತು ಅಮೋಲ್ ಸ್ಮೋಕ್ ಕ್ಯಾನ್ (Amol Smoke Can) ಸಿಡಿಸಿದ
ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ಪರಾರಿಯಾಗಿದ್ದ.
ಈತ ಬಂಗಾಳದ ಎನ್ಜಿಒ (NGO) ಒಂದರ ಪ್ರಧಾನ ಕಾರ್ಯದರ್ಶಿಯಾಗಿದ್ದ. ಗಾಂಧಿ ಚಿಂತನೆಗಳ ಹಾಗೂ ಪ್ರಧಾನಿ ಮೋದಿಯವರ ವಿರೋಧಿಯಾಗಿದ್ದ. ಬುಧವಾರ ದಾಳಿ ನಡೆಯುವಾಗ ಸಂಸತ್ತಿನ
ಹೊರಗಿನ ಘಟನೆಯನ್ನು ಚಿತ್ರೀಕರಿಸಿಕೊಂಡು ಪರಾರಿಯಾಗಿದ್ದ. ಬಿಹಾರ (Bihar) ಮೂಲದ ಲಲಿತ್ ಕೋಲ್ಕತಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಾ ಎನ್ಜಿಒಗಳ ಜೊತೆ ಸೇರಿ ಬೇರೆ ಬೇರೆ ಹೋರಾಟಗಳಲ್ಲಿ
ಪಾಲ್ಗೊಳ್ಳುತ್ತಿದ್ದನು.
ಭಗತ್ ಸಿಂಗ್ರಿಂದ (Bhagat Singh) ಪ್ರೇರೇಪಣೆಗೊಂಡಿದ್ದ ಈತ, ಫೇಸ್ಬುಕ್ನಲ್ಲಿರುವ ಭಗತ್ ಸಿಂಗ್ ಫ್ಯಾನ್ ಕ್ಲಬ್ ಮೂಲಕ ಉಳಿದ ದಾಳಿಕೋರರ ಸಂಪರ್ಕಕ್ಕೆ ಬಂದಿದ್ದ. ಸಂಸತ್ ಮೇಲೆ ದಾಳಿ
ನಡೆಸಲು, ಅದಕ್ಕಾಗಿ ಪರಿಶೀಲನೆ ನಡೆಸಲು, 22ನೇ ವರ್ಷಾಚರಣೆ ದಿನವೇ ದಾಳಿ ನಡೆಸಲು ದಿನ ನಿಗದಿ ಮಾಡಿದ್ದು ಈತನೇ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಬಿಹಾರ ಮೂಲದ ಲಲಿತ್
ಲಲಿತ್ ಝಾ ಮೂಲತಃ ಬಿಹಾರದವನಾಗಿದ್ದು, ಕೋಲ್ಕತಾದಲ್ಲಿ (Kolkata) ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಈತ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕಠಿಣವಾದ ಅಕ್ರಮ ಚಟುವಟಿಕೆಗಳ ತಡೆ
ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ತಾನು ಸೆರೆ ಹಿಡಿದ ವಿಡಿಯೋವನ್ನು ಕೋಲ್ಕತ್ತಾದಲ್ಲಿನ ಎನ್ಜಿಒ ಸಂಸ್ಥಾಪಕ ನೀಲಾಕ್ಷ್ (Neelaksh) ಎಂಬಾತನ ಮೊಬೈಲ್ಗೆ ಕಳುಹಿಸಿ, ಇದನ್ನು ಸುರಕ್ಷಿತವಾಗಿ ಇಡು ಎಂಬ ಸಂದೇಶ ರವಾನಿಸಿದ್ದ ಎಂಬ
ವಿಷಯವೂ ಬೆಳಕಿಗೆ ಬಂದಿತ್ತು.
ಇದನ್ನು ಓದಿ: ಮುಟ್ಟು ಅಂಗವೈಕಲ್ಯವಲ್ಲ, ಮುಟ್ಟಿನ ರಜೆ ಬೇಕಿಲ್ಲ – ಸಚಿವೆ ಸ್ಮೃತಿ ಇರಾನಿ
- ಭವ್ಯಶ್ರೀ ಆರ್ ಜೆ