ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಕೊರೋನಾ ಬಳಿಕ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ .ಅಣ್ಣಾತ್ತೆ ಚಿತ್ರದ ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದ್ದು ಭರದಿಂದ ಶೂಟಿಂಗ್ ನಡೆಯುತ್ತಿದೆ . ವಿಶೇಷ ಅಂದ್ರೆ ಚಿತ್ರೀಕರಣ ಸಂದರ್ಭದಲ್ಲಿ ರಜನಿಕಾಂತ್ ಜೊತೆ ಮಗಳು ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ . ಅಪ್ಪನ ಜೊತೆಗಿದ್ದು ಮಗಳು ತಂದೆಯ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ .

ಇನ್ನು ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡುತ್ತಿದ್ದು ಸನ್ ಪಿಕ್ಷರ್ಸ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ . ಚಿತ್ರದಲ್ಲಿ ನಯನ್ ತಾರಾ, ಕೀರ್ತಿ ಸುರೇಶ್ , ಖುಷ್ಬು, ಮೀನಾ , ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ .ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ

Exit mobile version