ಮತ್ತೊಮ್ಮೆ ಲವ್ ಸ್ಟೋರಿ ಮೂಲಕ ಮೋಡಿ ಮಾಡಲಿದ್ದಾರೆ ಡೈರೆಕ್ಟರ್ ಆದಿ ಜೆ.ಕೆ

ಬಾನು ವೆಡ್ಸ್ ಭೂಮಿ. ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಸೂಪರ್ ಲವ್ ಸ್ಟೋರಿ.ಪ್ರೇಮಿಗಳಿಗಾಗಿ ಹೆಣದಿರುವ ಈ ಚಿತ್ರ ನಿಜವಾಗ್ಲೂ ಅದೆಷ್ಟೋ ಪ್ರೇಮಿಗಳಿಗೆ ಆದರ್ಶವಾಗಿತ್ತು,.. ಇದೀಗ ಬಾನು ವೆಡ್ಸ್ ಭೂಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರೋ ನಿರ್ದಶಕರು ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ . ಈ ಮೂಲಕ ಮತ್ತೊಂದು ಮೆಸೇಜ್ ಲವ್ ಸ್ಟೋರಿಯೊಂದಿಗೆ ಗಾಂಧೀನಗರದಲ್ಲಿ ಸೌಂಡ್ ಮಾಡಲು ರೆಡಿಯಾಗಿದ್ದಾರೆ ..

ಬ್ಲಡ್ ಹ್ಯಾಂಡ್ .ಸ್ಯಾಂಡಲ್ ವುಡ್ ಗೆ ಸೇರ್ಪಡೆಯಾಗಿರೋ ಹೊಸ ಸಿನಿಮಾ. ಕಂಪ್ಲೀಟ್ ಲವ್ ಕಹಾನಿ ಬೇಸ್ ಇಡ್ಕೊಂಡು ರೆಡಿಯಾಗಿರೋ ಈ ಚಿತ್ರ ;ಕಳೆದವಾರವಷ್ಟೇ ತಮ್ಮ ಸಿನಿಮಾದ ಮೂಹುರ್ತ ಮುಗಿಸಿ ,ಶೂಟಿಂಗ್ ಕೆಲಸಕ್ಕೆ ತಯಾರಾಗಿ ನಿಂತಿದೆ ..ಬ್ಲಡ್ ಹ್ಯಾಂಡ್ ಸಿನಿಮಾ ಕೊರೋನಾದ ನಡುವೆಯೂ ಇತ್ತೀಚೆಗೆ ನಗರದ ಮಾಗಡಿ ರೋಡ್ ಬಳಿ ಇರುವ ಪುಟ್ಟಣ್ಣ ಸ್ಟುಡಿಯೋದಲ್ಲಿ ಮೂಹುರ್ತವನ್ನು ಬಹಳ ಸರಳವಾಗಿ ನೆರವೇರಿಸಿಕೊಂಡಿದೆ .

ಚಿತ್ರತಂಡದವರೇ ಸಿನಿಮಾಕ್ಕೆ ಕ್ಲಾಪ್ ಮಾಡೋದರ ಮೂಲಕ ಕಾರ್ಯಕ್ರಮವನ್ನು ನಡೆಸಿದ್ದು,; ದೇ ವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ . ಜೊತೆಗೆ ಶೂಟಿಂಗನ್ನು ಅಂದೇ ಚಿತ್ರತಂಡ ಆರಂಭಿಸಿದೆ ..ಅಂದಹಾಗೆ ಚಿತ್ರದಲ್ಲಿ ಹೊಸ ಮುಖವನ್ನು ನಾಯಕನ್ನಾಗಿ ನಿರ್ದೇಶಕರು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದು, ನಾಯಕಿಯ ಪಾತ್ರದಲ್ಲಿ ಶೃತಿ ಮಿಂಚಲಿದ್ದಾರೆ .. ಇವರಿಬ್ಬರ ಕೆಮೆಸ್ಟ್ರಿ ಯಾವ ರೀತಿ ಜನರ ಮ.ನಸ್ಸು ಸೆಳೆಯುತ್ತೆ ಅನ್ನೋದಕ್ಕೆ ಚಿತ್ರ ಬರುವವರೆಗು ಕಾಯಬೇಕು ..

Exit mobile version