ಚೆನ್ನೈ, ನ. 07: ಬಾಹ್ಯಾಕಾಶ ಜಗತ್ತಿನಲ್ಲಿ ಆನೇಕ ಯಶಸ್ಸಿನ ಧ್ವಜಗಳನ್ನು ಸ್ಥಾಪಿಸಿರುವ ಇಸ್ರೋ ಇಂದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಇಮೇಜಿಂಗ್ ಉಪಗ್ರಹ ಇಒಎಸ್-01 ಸೇರಿ 10 ಉಪಗ್ರಹಗಳನ್ನು ಇಂದು ಉಡಾವಣೆ ಮಾಡುವುದಕ್ಕೆ ಇಸ್ರೋ ಸಜ್ಜಾಗಿದೆ. ಈಗಾಗಲೇ ಇದಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಶ್ರೀಹರಿ ಕೋಟಾದ ಮೊದಲನೇ ಲಾಂಚ್ ಪ್ಯಾಡ್ನಿಂದ ಅಪರಾಹ್ನ 3.02 ಗಂಟೆಗೆ ಉಡಾವಣೆಯಾಗಲಿದೆ.
ಇಒಎಸ್-01 ಉಪಗ್ರಹ ಈ ಮೊದಲು ರಿಯಾಸ್ಯಾಟ್-2ಬಿಆರ್2 ಆಗಿತ್ತು. ಅದರಲ್ಲಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ. ಇಂದಿನ ಉಡಾವಣೆಯೊಂದಿಗೆ ಒಟ್ಟಾರೆಯಾಗಿ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಇಸ್ರೋ ಗಿದೆ.