ಗ್ಯಾರಂಟಿಗಳನ್ನು ವಿರೋಧಿಸಿದವರೇ ಗ್ಯಾರಂಟಿಗಳನ್ನು ಘೋಷಿಸಿದರು: ಎಂ.ಬಿ ಪಾಟೀಲ್

Vijayapura: ನಿನ್ನೆಯಷ್ಟೇ 4 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ (MB Patil Abt Guarantees) ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ನಾವು ಎಲ್ಲಿ ಎಡವಿದ್ದೇವೆ? ಯಾಕೆ ಈ ರೀತಿ ಫಲಿತಾಂಶ ಬಂತು? ಎಂಬುದರ ಕುರಿತು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ

ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ (M B Patil) ಹೇಳಿದ್ದಾರೆ.

ಮಧ್ಯಪ್ರದೇಶ (Madhya Pradesh), ಛತ್ತಿಸಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ (Congress) ಗೆಲ್ಲುವ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಇದ್ದರೂ ಯಾಕೆ ಈ ರೀತಿ ಫಲಿತಾಂಶ ಬಂತು ಎಂಬುದರ

ಕುರಿತು ಚರ್ಚೆ ಮಾಡುತ್ತೇವೆ ಎಂದು ವಿಜಯಪುರದಲ್ಲಿ (Vijayapura) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರಂಟಿ ವರ್ಕೌಟ್ (Guarantee Workout) ಆಗಲಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿಗಳನ್ನು ವಿರೋಧಿಸಿದವರು

ಕೂಡ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರು. ಯಾರು ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದರೋ ಅವರೇ ಖುದ್ದಾಗಿ ಗ್ಯಾರಂಟಿ ಘೋಷಣೆ ಮಾಡಿದರು. ಹಿಗಾಗಿ ಅನೇಕ ಕಾರಣಗಳು ಇರುತ್ತವೆ.

ಕರ್ನಾಟಕದಲ್ಲಿ (Karnataka) ಗ್ಯಾರಂಟಿ ವರ್ಕೌಟ್ ಆಗಿದೆ ಎಂಬಂತಾಯಿತಲ್ಲವೇ? ನಾವು ಮಾಡಿದ್ದನ್ನೇ ಅಲ್ಲಿ ಅವರೂ ಕೂಡ ಮಾಡಿದ್ದಾರೆ. ಆ ಕಾರಣವೂ ಇರಬಹುದು. ಹೀಗಾಗಿ ನಮ್ಮ ಪಕ್ಷದ

ವರಿಷ್ಠ ಮಂಡಳಿ, ಕಾಂಗ್ರೆಸ್ ಕಾರ್ಯಕಾರಿ ಮಂಡಳಿ ಈ ಕುರಿತು ಚರ್ಚೆ (MB Patil Abt Guarantees) ಮಾಡಲಿದೆ ಎಂದು ಹೇಳಿದರು.

ಕರ್ನಾಟಕದ ನಾಯಕರಿಗೆ ಉಸ್ತುವಾರಿ ವಹಿಸಿದ್ದರು. ತೆಲಂಗಾಣದ (Telangana) ಗೆಲುವು ಮತದಾರರ ಗೆಲುವು. ಅದರ ಶ್ರೆಯಸ್ಸು ತೆಲಂಗಾಣ ಜನರಿಗೆ ಸಲ್ಲುತ್ತದೆ. ಅಲ್ಲಿಯ ರೇವಂತರೆಡ್ಡಿ

ಸೇರಿದಂತೆ ನಾನಾ ನಾಯಕರು, ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಹುಲ್‌ ಗಾಂಧಿ ಮತ್ತಿತರರು ರೂಪಿಸಿದ ಕಾರ್ಯತಂತ್ರ ಫಲ ನೀಡಿದೆ. ಗೆಲುವಿನ

ಶ್ರೆಯಸ್ಸು ತೆಲಂಗಾಣ ಜನತೆಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು

ಲೋಕಸಭೆ ಚುನಾವಣೆ ಮೇಲೆ ಪರಿಣಾಮ ವಿಚಾರ
ಮೂರು ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿರುವ ವಿಚಾರ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ? ಎಂಬ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಲೋಕಸಭೆ ಚುನಾವಣೆಯಲ್ಲಿ

ಇಂಡಿಯಾ (India) ಒಕ್ಕೂಟದ ಪಕ್ಷಗಳು, ಅದರಲ್ಲಿಯೂ ಬಿಹಾರ, ಉತ್ತರ ಪ್ರದೇಶದಲ್ಲಿ ಬಹಳಷ್ಟು ಮೈತ್ರಿಕೂಟ ಆಗಲಿದೆ. ಅಲ್ಲದೇ, ನಮ್ಮ ಜಾತ್ಯತೀತ ಮತದಾರರು ನಮ್ಮ ಕಡೆಗೆ ಇರುತ್ತಾರೆ.

ಬಹಳಷ್ಟು ಜನ ನಮಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಇದನ್ನು ಓದಿ: ಅರ್ಜುನ ಆನೆ ಸಾವು ಪ್ರಕರಣ: ಅರ್ಜುನ ಸಾವಿನ ಬಗ್ಗೆ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ

Exit mobile version