ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಬಗ್ಗೆ ಸುಧಾಕರ್ ನಿಲುವೇನು ?

ಬೆಂಗಳೂರು ನ 9 :  ಕೋವಿಡ್ ನಿಂದ ಜನ- ಸಾಮಾನ್ಯರು ತತ್ತರಿಸಿ ಹೋಗಿದ್ದು, ಈ ವರ್ಷ ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಂಗಳವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಮೆಡಿಕಲ್ ಕಾಲೇಜುಗಳ ಒಕ್ಕೂಟ ಶೇ.30% ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮೆಡಿಕಲ್‌ ಕಾಲೇಜುಗಳ ಒಕ್ಕೂಟ ಪ್ರಸ್ತಾವನೆ ಮಾಡಿದ್ದರು,ಆದರೆ ಶುಲ್ಕ ಹೆಚ್ಚಳ ಮಾಡುವುದಿಲ್ಲ,ಕೋವಿಡ್ ಸಂಕಷ್ಟ ದಲ್ಲಿರುವ ಪೋಷಕರಿಗೆ ಮತ್ತಷ್ಟು ಹೊರೆ ಕೊಡಲು ಇಷ್ಟವಿಲ್ಲ’ ಎಂದರು.

‘ಇಂದು ಮೆಡಿಕಲ್ ಕಾಲೇಜು ಗಳ ಒಕ್ಕೂಟದೊಂದಿಗೆ ಸಭೆ ನಡೆಯಲಿದೆ.ಇಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು.
ಕಳೆದ ಬಾರಿ ಕೋವಿಡ್ ನಡುವೆಯೂ ಶುಲ್ಕ ಹೆಚ್ಚಳ ಮಾಡಲಾಗಿತ್ತು.ಈಗ ಮತ್ತೆ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ’ಎಂದರು.

ಮಕ್ಕಳಿಗೆ ಕೋವಿಡ್ ಲಸಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕೋವಿಡ್ ಮೊದಲನೇ ಡೋಸ್ ಶೇ. 89‌ರಷ್ಟು ಜನರು ಪಡೆದಿದ್ದಾರೆ
ಆದರೆ ಎರಡನೇ ಡೋಸ್ ಶೇ.48ರಷ್ಚು ಜನ ಮಾತ್ರ ಪಡೆದಿದ್ದಾರೆ. ನಿರ್ಲಕ್ಷ್ಯ ಮನೋಭಾವ ಜನರಲ್ಲಿ ಮೂಡಿದೆ ಎಂದರು.

ಜೈಡಸ್‌ ಲಸಿಕೆ ೧ ಕೋಟಿ ಬೇಡಿಕೆ ಇದೆ,ಆರೋಗ್ಯ ನಂದನ ಕಾರ್ಯಕ್ರಮದಡಿ ಡೇಟಾ ಕಲೆಕ್ಟ್‌ ಆಗಿದೆ. ಮುಂದಿನ ವಾರದಿಂದ ಮಕ್ಕಳಿಗೆ ಲಸಿಕೆ ಶುರುವಾಗುವ ಸಾಧ್ಯತೆ ಇದೆ ಎಂದರು.

Exit mobile version