ಮೇಕೆದಾಟು ಯೋಜನೆಗೆ ಮೊದಲು ಸ್ಟಾಲಿನ್ ಒಪ್ಪಿಸಿ, ಮೋದಿಯಿಂದ 2 ಸೆಕೆಂಡ್ ನಲ್ಲಿ ಅನುಮತಿ ಕೊಡಿಸುತ್ತೇನೆ:ಎಚ್ ಡಿ ಕುಮಾರಸ್ವಾಮಿ

Nagamangala : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (H D Devegowda) ಅವರು ಸಾಧ್ಯವಿದ್ದರೆ ಮೋದಿ ಬಳಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅನುಮತಿ ತರಲಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸವಾಲಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿ ಸವಾಲು ಹಾಕಿ ಮಂಡ್ಯ ಜಿಲ್ಲೆಯ ಜನರು ತಮಗೆ ಆಶೀರ್ವಾದ ಮಾಡಿದ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆ (Mekedatu Scheme)ಯನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿ, ಅಣೆಕಟ್ಟೆ ನಿರ್ಮಾಣಕ್ಕೆ ಎಲ್ಲರೀತಿಯ ಸಹಕಾರ ನೀಡಲಾಗುವುದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ (Mandya Loksabha Constitution) ಜೆಡಿಎಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. 

ಪಟ್ಟಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಜೆಡಿಎಸ್‌ (JDS) ಮತ್ತು ಬಿಜೆಪಿ ಕಾರ‍್ಯಕರ್ತರ ಬೃಹತ್‌ ಪ್ರಚಾರ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು,ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣದ ವಿಷಯ ಇವತ್ತಿನದಲ್ಲ. ಸುಮಾರು 30 ವರ್ಷಗಳಷ್ಟು ಹಳೆಯದು. ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ಬಳಿ ಮಾತನಾಡಿದ್ದೆ.

ಜತೆಗೆ ಡಿಪಿಆರ್‌ ಮಾಡಿಸಿದ್ದೆ. ಈಗಲೂ ಆ ಫೈಲ್‌ ದಿಲ್ಲಿಯಲ್ಲೇ ಇದೆ. ನೀರಾವರಿ ಯೋಜನೆ ಸಾಕಾರಗೊಳಿಸದಿದ್ದರೆ ಮತ್ತೆಂದೂ ನಿಮ್ಮ ಮುಂದೆ ಬರೋದಿಲ್ಲ, ಮತ ಕೇಳುವುದು ಇಲ್ಲ ಇದೊಂದು ಬಾರಿ ಅವಕಾಶ ನೀಡಿ ಎಂದು ಹೇಳಿದ್ದಾರೆ. ನಮ್ಮ ನೀರು-ನಮ್ಮ ಹಕ್ಕು ಅಂತಾ ಹೋರಾಟ ಮಾಡಿದವರು ಈಗ ನಮ್ಮ ನೀರು-ತಮಿಳುನಾಡು ಹಕ್ಕು ಅಂತಿದ್ದಾರೆ. ಕೆಆರ್‌ಎಸ್‌ನಲ್ಲಿ (KRS) 82 ಅಡಿ ನೀರಿದ್ದರೂ ರೈತರ ಬೆಳೆಗೆ ನೀರು ಕೊಟ್ಟಿಲ್ಲ. ಹೊಸದಾಗಿ ಬೆಳೆ ಬೆಳೆಯಬೇಡಿ ಎನ್ನುತ್ತಾರೆ ಈಗಿನ ಕೃಷಿ ಸಚಿವರು.

ಆದರೆ, ವಿ.ಸಿ.ನಾಲಾ (V C Nala) ಆಧುನೀಕರಣ ಕಾಮಗಾರಿಗೆ 527 ಕೋಟಿ ರೂ.ಅನುದಾನ ನೀಡಿದ್ದು ನಾನು. ಅದರ ಎಸ್ಟಿಮೇಟ್‌ ಹೆಚ್ಚು ಮಾಡಿ ಕಾಮಗಾರಿ ಕೊಟ್ಟಿರೋದು ಕೈ ಅಭ್ಯರ್ಥಿಗೆ. ಅದರ ಪೂರ್ಣ ಹಣವನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ, ತಾವೂ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮೇಕೆದಾಟು ಯೋಜನೆ ಕಾನೂನಿನ ಚೌಕಟ್ಟಿನಲ್ಲಿಯೇ ಸಂಪೂರ್ಣ ಬಗೆಹರಿಸಲಾಗುವುದು. ಅದರೆ, ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದ ಮಾತುಗಳನ್ನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿ ಕಾರಿದ್ದಾರೆ.

Exit mobile version