ವಿದ್ಯಾರ್ಥಿನಿಯರಿಗೆ “ಮುಟ್ಟಿನ ರಜೆ” ನೀಡಿದ ಪಂಜಾಬ್ ವಿಶ್ವವಿದ್ಯಾನಿಲಯ

Punjab University

Amritsar: ಪಂಜಾಬ್ ವಿಶ್ವವಿದಾಲಯವು (Panjab University) ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿದೆ. ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಈಗ ತಿಂಗಳ ಮುಟ್ಟಿನ ರಜೆಗಾಗಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಅವರು ನಿಗದಿತ ಫಾರ್ಮ್ ಅನ್ನು ಭರ್ತಿ ಮಾಡಿ, ಅದಕ್ಕೆ ಅನುಮೋದನೆ ಪಡೆಯಬೇಕು ಎಂದು ತಿಳಿಸಿದೆ.

2024-25ರ ಶೈಕ್ಷಣಿಕ ಅವಧಿಯ ಮುಂಬರುವ ಸೆಮಿಸ್ಟರ್ಗಳಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಪಂಜಾಬ್ ವಿಶ್ವವಿದ್ಯಾಲಯದ ಕುಲಪತಿಗಳು ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ವಿದ್ಯಾರ್ಥಿನಿಯರು ಕನಿಷ್ಠ 15 ದಿನಗಳ ಕಾಲ ಬೋಧನೆ ನಡೆಯುವ ಕ್ಯಾಲೆಂಡರ್ (Calendar) ತಿಂಗಳಿಗೆ ಒಂದನ್ನು ಮುಟ್ಟಿನ ರಕೆಯಾಗಿ ತೆಗೆದುಕೊಳ್ಳಬಹುದು. ವಿದ್ಯಾರ್ಥಿನಿಯರು ಪ್ರತಿ ಸೆಮಿಸ್ಟರ್ಗೆ ಗರಿಷ್ಠ ನಾಲ್ಕು ದಿನಗಳ ಮುಟ್ಟಿನ ರಜೆಯನ್ನು ತೆಗೆದುಕೊಳ್ಳಲು ಅನುಮತಿಸಲಾಗುವುದು, ರಜೆ ದಿನವು ಬೋಧನಾ ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ರಜೆ ಪಡೆಯಲು ಇಲಾಖೆ ಕಚೇರಿಯಲ್ಲಿ ಫಾರ್ಮ್ (Farm) ಅನ್ನು ಭರ್ತಿ ಮಾಡಬೇಕು. ಇದನ್ನು ಅಧ್ಯಕ್ಷರು/ನಿರ್ದೇಶಕರು ಅನುಮೋದಿಸಬೇಕಾಗುತ್ತದೆ. ವಿದ್ಯಾರ್ಥಿನಿಯ ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ರಜೆ ನೀಡಲಾಗುವುದು ಮತ್ತು ಆಕೆಯ ಅನುಪಸ್ಥಿತಿಯ ಐದು ಕೆಲಸದ ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಆ ನಿರ್ದಿಷ್ಟ ದಿನದಂದು ವಾಸ್ತವವಾಗಿ ನೀಡಿದ ಉಪನ್ಯಾಸಗಳ ಸಂಖ್ಯೆಯನ್ನು ಪ್ರತಿ ತಿಂಗಳ ಕೊನೆಯಲ್ಲಿ ವಿದ್ಯಾರ್ಥಿನಿಯು ಹಾಜರಾದ ಒಟ್ಟು ಉಪನ್ಯಾಸಗಳಿಗೆ ಸೇರಿಸಲಾಗುತ್ತದೆ. ಒಂದು ತಿಂಗಳಲ್ಲಿ, ಒರ್ವ ವಿದ್ಯಾರ್ಥಿನಿಯು #Menstrualleave ಕೇವಲ ಒಂದು ದಿನದ ರಜೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅದನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳವರೆಗೆ ವಿಭಜಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಯಾವುದೇ ಪರೀಕ್ಷೆಯ ಸಮಯದಲ್ಲಿ ರಜೆಗಳನ್ನು ಪಡೆಯಲು ಅವಕಾಶ ಇರುವುದಿಲ್ಲ ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

Exit mobile version