ತರಬೇತಿ ವೇಳೆ ಮಿಗ್-21 ಪತನ: ಪೈಲೆಟ್ ಸಾವು

ಹೊಸದಿಲ್ಲಿ, ಮಾ. 17: ಮಿಗ್-21 ಬೈಸನ್ ವಿಮಾನ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ವಾಯುಪಡೆಯ ಪೈಲೆಟ್  ಗ್ರೂಪ್ ಕ್ಯಾಪ್ಟನ್ ಎ. ಗುಪ್ತಾ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆ ಇಂದು ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಯುದ್ಧ ತರಬೇತಿ ಕಾರ್ಯಾಚರಣೆಗೆ ವಿಮಾನ ಹೊರಟ್ಟಿದ್ದಾಗ ಈ ಅಪಘಾತ ಸಂಭವಿಸಿದೆ. ವಾಯುಪಡೆಯ ಹೇಳಿಕೆಯು ವಾಯುನೆಲೆಯ ಸ್ಥಳವನ್ನು ಬಹಿರಂಗಪಡಿಸಿಲ್ಲ. ಅಫಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ಘಟನೆಯ ಬಗ್ಗೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.  ಸಾವನ್ನಪ್ಪಿದ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತದೆ. ಅಪಘಾತದ ಕಾರಣವನ್ನು ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ದುರಂತದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ.

Exit mobile version