ರೈತರಿಗೆ ಶಾಕ್: ಲೀಟರ್ ಹಾಲಿಗೆ 1.50 ರೂ.ಇಳಿಸಿ ಆದೇಶ ಹೊರಡಿಸಿದ ಮನ್ಮುಲ್

Mandya: ರಾಜ್ಯದಲ್ಲಿ ಹಾಲಿನ (Milk Price Increase) ದರ ಏರಿಕೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ ಇಳಿಕೆ ಮಾಡಿ ಮಂಡ್ಯ (Mandya) ಜಿಲ್ಲಾ ಹಾಲು ಒಕ್ಕೂಟ ಆದೇಶ ಹೊರಡಿಸಿರುವುದು ರೈತರಿಗೆ ಬಿಗ್ ಶಾಕ್ ನೀಡಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈನುಗಾರಿಕೆ (Dairy Farming)ಯನ್ನೇ ನಂಬಿಕೊಂಡಿರುವ ಹಳೇ ಮೈಸೂರು (Mysore) ಭಾಗದ ರೈತರು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಈ ಆದೇಶದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಡೆಯನ್ನೇ ರಾಜ್ಯದ ಇತರ ಹಾಲು ಒಕ್ಕೂಟಗಳು ಅನುಸರಿಸಿದರೆ, ರಾಜ್ಯದ ಇತರೆ ಭಾಗಗಳಲ್ಲಿಯೂ ಕೂಡಾ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹೊರಡಿಸಿರುವ ಆದೇಶದನ್ವಯ ಪ್ರತಿ ಲೀಟರ್ ಹಾಲಿಗೆ 1.50 ರೂಪಾಯಿ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಇನ್ನೊಂದೆಡೆ ಪಶು ಆಹಾರದ ಬೆಲೆ ತೀವ್ರ ಏರಿಕೆಯಾಗಿದ್ದು, ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ (Farmers) ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಪ್ರತಿ ಲೀಟರ್ ಹಾಲಿಗೆ 33.50 ರೂ. ನೀಡಲಾಗುತ್ತಿತ್ತು. ಈಗ 1.50 ರೂಪಾಯಿ ಕಡಿತಗೊಳಿಸಿರುವುದರಿಂದ ಪ್ರತಿ ಲೀಟರ್ ಹಾಲಿಗೆ ಕೇವಲ 32 ರೂ. ರೈತರಿಗೆ ದೊರೆಯುತ್ತದೆ. ಇದರಿಂದ ಹೈನುಗಾರಿಕೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಕೂಡಲೇ ಹಾಲಿನ ದರ ಏರಿಕೆ ಮಾಡಬೇಕು, ಹಾಲು ಒಕ್ಕೂಟಗಳು (Milk unions)ರೈತರ ಹಿತ ಕಾಪಾಡಬೇಕೆಂದು ರೈತ ಸಂಘ ಆಗ್ರಹಿಸಿದೆ. ಹಾಲಿನ ದರ ಹೆಚ್ಚಳ ಮಾಡದಿದ್ರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ರೈತ ಸಂಘ (Farmers Association) ಎಚ್ಚರಿಕೆಯನ್ನೂ ನೀಡಿದೆ.

Exit mobile version