ತೆಲಂಗಾಣ ಚುನಾವಣೆಯಲ್ಲಿ ಸದ್ದು ಮಾಡಿದ್ದ ಎಮ್ಮೆ ಕಾಯುತ್ತಿದ್ದೇನೆಂದ ಯುವತಿ ಗೆದ್ದುಪಡೆದ ಮತಗಳೆಷ್ಟು?

Telangana: ತೆಲಂಗಾಣ (Telangana)ದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಬಿ.ಆರ್.ಎಸ್ (Miracle Voting in Telangana)

ಪಕ್ಷ ಸತತವಾಗಿ ಎರಡು ಬಾರಿ ಆಡಳಿತ ನಡೆಸಿದ್ದರೂ ಈ ಸಲ ಕಾಂಗ್ರೆಸ್ (Congress) ಮುಂದೆ ತಲೆಬಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅವರು, ಪದವಿ ಓದಿ ನಿರುದ್ಯೋಗದ ಕಾರಣ ಎಮ್ಮೆ ಕಾಯುತ್ತಿದ್ದೇನೆ ಎಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದ ಶಿರಿಷಾ(ಬರ್ರೆಲಕ್ಕ) (Shireesha Barrelakka)

ಎಂಬ ಹೊಸ ಹೆಸರಿನೊಂದಿಗೆ ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ನಂತರ ಕೊಲ್ಲಾಪುರ (Kolhapur) ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಧುಮುಕಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಇಲ್ಲಿಯವರೆಗೂ ಫಾಲೋವರ್ಸ್ (Followers) ಕಂಡು ಇವರು ಈ ಬಾರಿ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಬರ್ರೆಲಕ್ಕನ ಕ್ರೇಜ್ ವೋಟ್ ಬ್ಯಾಂಕ್ (Barrelakka Crazy

Vote Bank) ಆಗಿ ಬದಲಾಗಿಲ್ಲ. ಎಂಬುದು ಸ್ಪಷ್ಟವಾಗಿದ್ದು, ಬರ್ರೆಲಕ್ಕ ಅವರಿಗೆ 5754 ಮತಗಳು ಬಿದ್ದಿವೆ ಎಂದು ವರದಿಯಾಗಿದೆ. ಇನ್ನು ಅವರು ಚುನಾವಣೆಯಲ್ಲಿ ಗೆಲ್ಲದಿದ್ದರು ಕನಿಷ್ಠ 15 ರಿಂದ 20

ಸಾವಿರ ಮತಗಳು ಅವರಿಗೆ ಬರುತ್ತವೆ ಎಂಬ ನಂಬಿಕೆ ಇತ್ತು. ಅದು ಕೂಡ ಸುಳ್ಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಾರ ಟ್ರೆಂಡ್ (Trend) ಆಗಿದ್ದ ಬರ್ರೆಲಕ್ಕನಿಗೆ ದೇಶದೆಲ್ಲೆಡೆಯಿಂದ ಬೆಂಎಂಬಲ

ವ್ಯಕ್ತವಾಗಿದ್ದರೂ, ಕೊಲ್ಲಾಪುರದ ಸ್ಥಳೀಯರು ಬರ್ರೆಲಕ್ಕನನ್ನು ಬೆಂಬಲಿಸಿಲ್ಲ ಎನ್ನುವುದು (Miracle Voting in Telangana) ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಶಿರಿಷಾ ಅವರು ಅಂಚೆ ಮತಗಳಲ್ಲಿ ಲೀಡ್ ನಲ್ಲಿದ್ದರು. ಆದರೆ ಇ.ವಿ.ಎಂ (EVM) ಮತ ಎಣಿಕೆಯಲ್ಲಿ ಅವರು ಹಿಂದೆ ಬಿದ್ದರು. 20 ಸುತ್ತುಗಳ ಮತ ಎಣಿಕೆ ಬಳಿಕ ಕೊಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ

ಜುಪಲ್ಲಿ ಕೃಷ್ಣರಾವ್ (Jupalli Krishna Rao) 93609 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇವರ ಪ್ರತಿಸ್ಪರ್ಧಿ ಭರತ್ ರಾಷ್ಟ್ರ ಸಮಿತಿಯಾ ಬಿರಂ ಹರ್ಷವರ್ಧನ್ ರೆಡ್ಡಿ (Beeram Harshavardan Reddy) 63678 ಮತಗಳನ್ನು ಗಳಿಸಿದರು. ಜ್ಯೂಪಲ್ಲಿ ಕೃಷ್ಣರಾವ್ ಮತ್ತು ಹರ್ಷವರ್ಧನ್ ರೆಡ್ಡಿ

ನಡುವೆ 29931 ಮತಗಳ ಗೆಲುವಿನ ಅಂತರವಿದೆ. ಇನ್ನೂ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನಕ್ಕೆ ಎಲೆನ್ನಿ ಸುಧಾಕರ ರಾವ್ (Sudhakar Rao) ತೃಪ್ತಿತೃಪ್ತಿಪಟ್ಟುಕೊಂಡಿದ್ದು, 20389 ಮತಗಳನ್ನು ಪಡೆದು

40ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಇದನ್ನು ಓದಿ: 3ಡಿ ವರ್ಷನ್​ನಲ್ಲಿ ದೂಳೆಬ್ಬಿಸಲು ಬರ್ತಿದೆ ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ

Exit mobile version