Miss Universe 2023 : 72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ಇಂದು(ನವೆಂಬರ್ 18) ಎಲ್ ಸಾಲ್ವಡಾರ್ನಲ್ಲಿ ನಡೆಯಲಿದ್ದು, ಆಗಸ್ಟ್ನಲ್ಲಿ ನಡೆದ ಮಿಸ್ ದಿವಾ (Miss Diva 2023)
ಯೂನಿವರ್ಸ್ 2023ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಶ್ವೇತಾ ಈ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದು, 90 ಕ್ಕೂ ಹೆಚ್ಚು
ದೇಶಗಳಿಂದ ಸ್ಪರ್ಧಿಸುತ್ತಿದ್ದು, ಶ್ವೇತಾ ಶಾರ್ದಾ (Miss Universe 2023) ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಭಾರತದ ಕಾಲಮಾನದ ಪ್ರಕಾರ ನವೆಂಬರ್ 19ರಂದು ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ಎಕ್ಸ್ (Miss Universe Ex) ಖಾತೆ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ (YouTube) ವೀಕ್ಷಿಸಬಹುದಾಗಿದ್ದು,
ಈ ಮೂಲಕ 2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಶ್ವೇತಾ ಶಾರ್ದಾ ಯಾರು? ಹಾಗೂ ಅವರ ಕುರಿತ ಕೆಲವು ಆಸಕ್ತಿದಾಯಕ
ಮಾಹಿತಿಗಳಿ ಹೀಗಿವೆ.
ಶ್ವೇತಾ ಶಾರ್ದಾ ಅವರ ಇಂಟರೆಸ್ಟಿಂಗ್ ಸಂಗತಿಗಳು:
- ಚಂಡೀಗಢದಲ್ಲಿ ಮೇ 24, 2000 ಇಸವಿಯಲ್ಲಿ ಶ್ವೇತಾ ಅವರು ಜನಿಸಿದರು. ತಂದೆಯ ಆಸರೆಯಿಲ್ಲದೇ ತಾಯಿಯೊಂದಿಗೆ ಬೆಳೆದ ಶಾರ್ದಾ ತನ್ನ (Shweta Sharda)16 ನೇ ವಯಸ್ಸಿನಲ್ಲಿ
ತಾಯಿಯೊಂದಿಗೆ ಮುಂಬೈಗೆ ತೆರಳಿದರು. ಫೆಮಿನಾ ಬ್ಯೂಟಿ ಪೆಜೆಂಟ್ಸ್ (Femina Beauty Pageants) ಪ್ರಕಾರ , ಶ್ವೇತಾ ದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಒಪನ್ ಯೂನಿವರ್ಸಿಟಿಯಲ್ಲಿ
(Indira Gandhi National Open University, Delhi) ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
*ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ಡ್ಯಾನ್ಸ್ ಪ್ಲಸ್ ಮತ್ತು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೇರಿದಂತೆ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವುದಲ್ಲದೇ ಡ್ಯಾನ್ಸ್
ಕೊರಿಯೋಗ್ರಾಫರ್ ಆಗಿ ಹೆಸರು ಗಳಿಸಿದ್ದಾರೆ.
*ಆಗಸ್ಟ್ನಲ್ಲಿ ಮುಂಬೈನಲ್ಲಿ ನಡೆದ ಫಿನಾಲೆಯಲ್ಲಿ ಶ್ವೇತಾ ಶಾರ್ದಾ ಮಿಸ್ ದಿವಾ ಯೂನಿವರ್ಸ್ 2023 ಕಿರೀಟವನ್ನು ಗೆದ್ದು, ಮಿಸ್ ಯೂನಿವರ್ಸ್ 2023ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು
ಅರ್ಹತೆಗಳಿಸಿದ್ದಾರೆ. ಮಿಸ್ ದಿವಾ ಅಂತಿಮ ಹಂತದಲ್ಲಿ, ಶ್ವೇತಾ ಶಾರ್ದಾ ತನ್ನ ತಾಯಿಯನ್ನು “ತಮ್ಮ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ” ಎಂದು ಉಲ್ಲೇಖಿಸಿ ತೀರ್ಪುಗಾರರ ಮನಗೆದ್ದಿದ್ದಾರೆ.
*ಅಷ್ಟೇ ಅಲ್ಲದೆ ಬಾಲಿವುಡ್ನ ದೀಪಿಕಾ ಪಡುಕೋಣೆ ಮತ್ತು ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್, ಕತ್ರಿನಾ ಕೈಫ್, ಮೌನಿ ರಾಯ್ (Madhuri Dixit, Salman Khan, Katrina Kaif, Mouni Roy)
ಮುಂತಾದ ಜನಪ್ರಿಯ ನಟರೊಂದಿಗೆ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸಮಾಡಿದ್ದಾರೆ.
- ಶ್ವೇತಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಖತ್ ಆಕ್ಟೀವ್ ಆಗಿದ್ದು, ಇನ್ಟ್ಸಾಗ್ರಾಮ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ
“ಮಸ್ತ್ ಆಂಖೇನ್” ಎಂಬ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ನಟ ಶಂತನು ಮಹೇಶ್ವರಿ ಜೊತೆ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಎನ್ಕೌಂಟರ್
- ಭವ್ಯಶ್ರೀ ಆರ್ ಜೆ