Sirsi: ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ (Modi), ಕರ್ನಾಟಕದಲ್ಲಿ ನಡೆದ (Modi Against Congress) ಅದರಲ್ಲೂ ಕಾಲೇಜು ಆವರಣದಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಹತ್ಯೆಯಿಂದ
ಇಡೀ ದೇಶ ಆತಂಕಗೊಂಡಿದೆ. ರಾಜ್ಯದ ಜನ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ಗೊಂಡಿದ್ದಾರೆ. ಕರ್ನಾಟಕದಲ್ಲಿ (Karnataka) ಹೆಣ್ಣು ಮಕ್ಕಳ ಬದುಕಿನ ಕುರಿತು ಪೋಷಕರು ಚಿಂತಿಸುವಂತೆ ಮಾಡಿದೆ.
ಇದಕ್ಕೆಲ್ಲ ಕಾಂಗ್ರೆಸ್ ನ ಬದ್ಧತೆ ಕಾರಣ, ಕಾಲೇಜ್ ಕ್ಯಾಂಪಸ್ (College Campus) ನಲ್ಲಿ ಹೇಗೆ ಹತ್ಯೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಅವರು ವೋಟ್ ಬ್ಯಾಂಕ್ (Vote Bank) ಗಾಗಿ ಕೆಲವು
ದಿನಗಳಲ್ಲಿಯೇ ಆರೋಪಿಯನ್ನು ರಕ್ಷಿಸಲಿದ್ದಾರೆ. ಎಂದು (Modi Against Congress) ಮಾತಿನ ಪ್ರಹಾರ ನಡೆಸಿದ್ದಾರೆ .
ಕರ್ನಾಟಕವನ್ನು (Karnataka) ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಬ್ಯೂಸಿಯಾಗಿದೆ. ಅಪರಾಧವನ್ನು ನಿಯಂತ್ರಣಕ್ಕೆ ತರುವ ಬದಲು, ಕಾಂಗ್ರೆಸ್ ಸಮಾಜ ಮತ್ತು ದೇಶ ವಿರೋಧಿ
ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತಿದೆ ಹಾಗಾಗಿ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ .ಕರ್ನಾಟಕದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಇಡೀ ರಾಷ್ಟ್ರ ಆತಂಕಗೊಂಡಿದೆ.
ಕಾಂಗ್ರೆಸ್ (Congress) ಸರ್ಕಾರ ಹತಾಶೆಯಿಂದ ರಾಜ್ಯವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕದಂಬ ರಾಜರು ಕನ್ನಡ ನಾಡನ್ನು ಆಳಿದರು. ಅವರ ಕೊಡುಗೆಯನ್ನು ಜನರು ಎಂದಿಗೂ ಮರೆಯಲಾರರು. ಇಂತ ನೂರಾರು ರಾಜ ವಂಶಗಳು ದೇಶವನ್ನು ಕಟ್ಟಿದರು. ಇಂತಹ ರಾಜ ವಂಶಸ್ಥರು ದೇಶ ಲೂಟಿ
ಮಾಡಿದವರು ಎಂದು ಟೀಕಿಸುವುದನ್ನು ಜನರು ಸಹಿಸಬಲ್ಲರೆ? ಜನರಿಗೆ ಇತಿಹಾಸ ತಿಳಿದಿಲ್ಲವೇ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೆಸರು ಪ್ರಸ್ತಾಪಿಸದೆ ಅವರ ಹೇಳಿಕೆಗೆ
ತಿರುಗೇಟು ನೀಡಿದ್ದಾರೆ.
ಇದನ್ನು ಓದಿ: ಆಸ್ಪತ್ರೆಗೆ ದಾಖಲಾದ ಕರ್ನಾಟಕದ ಮಾಜಿ ಸಿಎಂ ಎಸ್ಎಂ ಕೃಷ್ಣ!