63% ರಷ್ಟು ಹಣ ವಿರೋಧ ಪಕ್ಷಗಳಿಗೆ ಹೋಗಿದೆ – ಚುನಾವಣಾ ಬಾಂಡ್ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

New Delhi: ಚುನಾವಣಾ ಬಾಂಡ್ಗಳ ವಿಷಯದಲ್ಲಿ ಬಿಜೆಪಿ (BJP) ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಿದ್ದು, ಕೇಂದ್ರದಲ್ಲಿ ಹಾಗೂ ದೇಶದ 16 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಚುನಾವಣಾ ಬಾಂಡ್ ಮೂಲಕ 37% ಹಣ ಬಂದಿದೆ, ಆದರೆ 63% ರಷ್ಟು ಹಣ ಕಾಂಗ್ರೆಸ್ (Congress) ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಹೋಗಿದೆ. ಆದರೆ ಆರೋಪ ನಮ್ಮ ಪಕ್ಷದ ಮೇಲೆ ಮಾತ್ರ ಮಾಡಲಾಗುತ್ತಿದೆ. ಅವರು ಕೂಡಾ ಚುನಾವಣಾ ಬಾಂಡ್ಗಳ ಮೂಲಕ ಹಣ ಪಡೆದಿದ್ದಾರೆ. ಆದರೆ ಆರೋಪ ಮಾತ್ರ ನಮ್ಮ ಮೇಲೆ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.

ಖಾಸಗಿ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಚುನಾವಣಾ ಬಾಂಡ್ಗಳನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಚುನಾವಣೆಗಳಲ್ಲಿ ಕಪ್ಪು ಹಣ ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶವಾಗಿತ್ತು. ಆದರೆ ಲೋಕಸಭಾ ಚುಣಾವಣೆಯಲ್ಲಿ ವಿಪಕ್ಷಗಳು ಸೋಲುತ್ತವೆ ಎಂದು ಉದ್ದೇಶದಿಂದ ಅದನ್ನು ಮರೆಮಾಚಲು ಇವಿಎಂ ಹಾಗೂ ಚುನಾವಣಾ ಬಾಂಡ್ ಮೇಲೆ ಅನುಮಾನ ವ್ಯಕ್ತಪಡಿಸುತ್ತವೆ. ವಿಪಕ್ಷಗಳುಗೆ ಯಾವುದೇ ವಿಷಯದಲ್ಲಿಯೂ ಬದ್ದತೆ ಎಂಬುದೇ ಇಲ್ಲ.

ಚುನಾವಣಾ ಬಾಂಡ್ (Election Bond) ಯೋಜನೆಗಳ ಬಗ್ಗೆ ವಿಪಕ್ಷಗಳು ದೇಶದಲ್ಲಿ ಸುಳ್ಳನ್ನು ಹಬ್ಬಿಸುತ್ತಿವೆ. ಮುಂದೊಂದು ದಿನ ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಇಂದು ಇದನ್ನು ವಿರೋಧಿಸಿದವರು ಸೇರಿದಂತೆ ಎಲ್ಲರೂ ಕೂಡಾ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ಕಪ್ಪು ಹಣ ದೊಡ್ಡ ಶಕ್ತಿಯಾಗಿದೆ. ಈ ಕಪ್ಪು ಹಣದಿಂದ ಚುನಾವಣೆ ಮುಕ್ತ ಮಾಡಬೇಕು ಎಂದು ಯೋಚಿಸುತ್ತಿರುವಾಗ, ಚುನಾವಣಾ ಬಾಂಡ್ ಚಿಂತನೆ ಬಂದಿತು. ನಗದು ಹಣದ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಚುನಾವಣಾ ಬಾಂಡ್ ವ್ಯವಸ್ಥೆ ಜಾರಿ ಮಾಡಲಾಯಿತು. ಆದರೆ ಯಾರು ಯಾರಿಗೆ ಹಣ ನೀಡಿದರು ಎಂದು ಗೊತ್ತಾದರೆ, ರಾಜಕೀಯ ಪಕ್ಷಗಳು ಸಮಸ್ಯೆ ಮಾಡಬಹುದು ಹೀಗಾಗಿ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿತ್ತು.

ಆದರೆ ಬಾಂಡ್ಗೆ ಹಣ ಎಲ್ಲಿಂದ ಬಂತು ಲೆಕ್ಕ ಸಿಗುತ್ತದೆ ಸರ್ಕಾರಕ್ಕೆ ಸಿಗುತ್ತದೆ. ಇದರಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಇನ್ನು ವಿವಿಧ ರಾಜಕೀಯ ಪಕ್ಷಗಳಿಗೆ 3, 000 ಕಂಪನಿ ಬಾಂಡ್ ಮೂಲಕ ಹಣ ನೀಡಿದೆ. ಅದರಲ್ಲಿ 26 ಕಂಪನಿಗಳ ವಿರುದ್ಧ ED ತನಿಖೆ ನಡೆಯುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

Exit mobile version