ಬೆಂಗಳೂರಿನಲ್ಲಿ ತೇಜಸ್​ ಯುದ್ಧ ವಿಮಾನದಲ್ಲಿ ಪ್ರಧಾನ ಮಂತ್ರಿ ಮೋದಿ ಹಾರಾಟ

Bengaluru: ಪ್ರಧಾನಿ ನರೇಂದ್ರ ಮೋದಿ ಅವರು, ತೇಜಸ್ ಯುದ್ಧ (Modi flies Tejas fighterjet) ವಿಮಾನದಲ್ಲಿ ಶನಿವಾರ (ನ.೨೫) ಹಾರಾಟ ನಡೆಸಿದ ಬಳಿಕ ತಮ್ಮ ಅನುಭವವನ್ನು

ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಹಲವು ಮಂದಿ ಸಚಿವರು ಹಾಗೂ ರಾಜಕಾರಣಿಗಳು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ.

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ (Hindustan Aeronautics Limited) ಭೇಟಿ ನೀಡಿದ ಪ್ರಧಾನಿ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಬಳಿಕ ತಮ್ಮ ಅನುಭವವನ್ನು

ಹಂಚಿಕೊಂಡ ಅವರು, ಸ್ವಾವಲಂಬನೆಯ ಕ್ಷೇತ್ರದಲ್ಲಿ ನಾವು ಜಗತ್ತಿನ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ಹೆಮ್ಮೆಯಿಂದ (Modi flies Tejas fighterjet) ಹೇಳಬಲ್ಲೆ ಎಂದಿದ್ದಾರೆ.

ಇಂದು ತೇಜಸ್‌ನಲ್ಲಿ ಹಾರಾಟ ಮಾಡಿರುವ ನಾನು, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಅಪಾರ

ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, ಡಿಆರ್​ಡಿಒ ಮತ್ತು ಎಚ್​ಎಎಲ್ (Air Force, DRDO and HAL) ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ

ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ವಾಯುಪಡೆ ಇತ್ತೀಚೆಗೆ 12 ಸುಧಾರಿತ ಸು30-ಎಂಕೆಐ (Su-30MKI) ಫೈಟರ್ ಜೆಟ್‌ಗಳ ಖರೀದಿಗಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಟೆಂಡರ್ ನೀಡಿದೆ. ಇವುಗಳನ್ನು ರಷ್ಯಾದ ಮೂಲ

ಉಪಕರಣ ತಯಾರಕರ ಸಹಭಾಗಿತ್ವದಲ್ಲಿ ಎಚ್​ಎಎಲ್ ಭಾರತದಲ್ಲಿ ತಯಾರಿಸಲಿದೆ ಎಂದು ರಕ್ಷಣಾ ಮೂಲಗಳು ಈ ಹಿಂದೆಯೇ ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಕಾರಣ ಮೋದಿ ಅವರ

ಎಚ್​ಎಎಲ್ ಭೇಟಿ ಮಹತ್ವ ಪಡೆದಿದೆ.

ಇದನ್ನು ಓದಿ: ರಾಜಸ್ಥಾನ ಅಪರಾಧಗಳಲ್ಲಿ ನಂ.1 ಆಗಲು ಕಾರಣ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

Exit mobile version