ಪೋಪ್‌ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ರೋಮ್ ಅ 30 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದಾರೆ. 2013 ರಲ್ಲಿ ಪೋಪ್ ಆದ ನಂತರ ಫ್ರಾನ್ಸಿಸ್ ಅವರನ್ನು ಭೇಟಿಯಾದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ.

ಸಾಮಾನ್ಯ ಜಾಗತಿಕ ವಿಷಯಗಳು, ಬಡತನದ ವಿರುದ್ಧ ಹೋರಾಡುವುದು ಮತ್ತು ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು ಸೇರಿದಂತೆ ಆಸಕ್ತಿಯ ಕ್ಷೇತ್ರಗಳ ಇಬ್ಬರು ನಡುವೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.

ಪ್ರಧಾನಿ ಮೋದಿ ಮತ್ತು ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರಾಗಿರುವ ಪೋಪ್ ಫ್ರಾನ್ಸಿಸ್ ನಡುವಣ ಮೊದಲ ಭೇಟಿ ಇದಾಗಿದೆ. ಪೋಪ್ ಅವರನ್ನು ಪ್ರಧಾನಿ ಭಾರತಕ್ಕೆ ಆಹ್ವಾನಿಸಿದ್ದಾರೆ.

ವ್ಯಾಟಿಕನ್‌ನಲ್ಲಿ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದ್ದರು.

ಪ್ರಧಾನಮಂತ್ರಿಯವರು ವ್ಯಾಟಿಕನ್ ಸಿಟಿ ರಾಜ್ಯದ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಅವರನ್ನು ಭೇಟಿ ಕೂಡ ಮಾಡಿದರು.

“ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅತ್ಯಂತ ಆತ್ಮೀಯ ಸಭೆ‌ ನಡೆಸಿದೆ. ಅವರೊಂದಿಗೆ ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದೆ” ಎಂದು ಪ್ರಧಾನಿ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.

Exit mobile version