ರಾಜಸ್ಥಾನ ಅಪರಾಧಗಳಲ್ಲಿ ನಂ.1 ಆಗಲು ಕಾರಣ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

Jaipur : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನ ವಿಧಾನಸಭೆ ಚುನಾವಣೆ ಸಲುವಾಗಿ (modi slams congress govt) ಗುರುವಾರ ವಿವಿಧೆಡೆ ಪ್ರಚಾರ ನಡೆಸಿದ್ದು, ಅಶೋಕ್

ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ (Congress) ಆಡಳಿತದಲ್ಲಿ ರಾಜ್ಯವು ಅಪರಾಧಗಳಲ್ಲಿ ನಂಬರ್ 1 ಆಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಪ್ರವಾಸೋದ್ಯಮ, ಕೈಗಾರಿಕೆಗಳು, ಶಿಕ್ಷಣದಲ್ಲಿ ದೇಶದಲ್ಲೇ ನಂ.1 ರಾಜ್ಯ ಆಗಿಸುತ್ತೇವೆ. ಆದರೆ, ಇಷ್ಟು ದಿನಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್‌

(Congress) ಸರ್ಕಾರವು ರಾಜ್ಯವನ್ನು ದೊಂಬಿ, ಅಪರಾಧಗಳು, ಭ್ರಷ್ಟಾಚಾರ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ನಂ.1 ಆಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ದಿಯೊಗಢ, ರಾಜಸ್ಮಂಡ್‌ ಸೇರಿದಂತೆ ಹಲವು ಕಡೆಗಳಲ್ಲಿ ಗುರುವಾರ ಸಾರ್ವಜನಿಕ ರಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಸಿಎಂ ಅಶೋಕ್‌ ಗೆಹ್ಲೋಟ್‌

(Ashok Gehlot) ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ”ಜನಪರ ಕಲ್ಯಾಣದ ಯೋಜನೆಗಳಲ್ಲಿ (modi slams congress govt) ಬಿಜೆಪಿ ಸರಕಾರವು ಜಾರಿಗೆ ತಂದಿತ್ತು.

ಆದರೆ, ಕಾಂಗ್ರೆಸ್‌ ಸರ್ಕಾರವು ಐದು ವರ್ಷಗಳ ಮುನ್ನ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಜಾರಿಗೆ ತಂದಿದ್ದ ಯೋಜನೆಗಳಿಗೆ ಬ್ರೇಕ್‌ ಹಾಕಿದ್ದು, ಈ ಬಾರಿ ಮತ್ತೆ ನಾವೇ ಅಧಿಕಾರಕ್ಕೆ ಬಂದು

ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದರು. ಇನ್ನು ನ. 25ರಂದು ರಾಜಸ್ಥಾನದಲ್ಲಿ (Rajasthan) ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು,

ಡಿ.3ರಂದು ಇತರೆ ನಾಲ್ಕು ರಾಜ್ಯಗಳ ಜೊತೆಗೆ ಫಲಿತಾಂಶ ಹೊರಬೀಳಲಿದೆ.

ಇದನ್ನು ಓದಿ : IDBI ಬ್ಯಾಂಕ್ನಲ್ಲಿ 2100 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ; ಪದವಿ ಪಾಸಾದವರಿಗೆ ಅವಕಾಶ

Exit mobile version