ಮೋದಿ ಪ್ರಮಾಣವಚನಕ್ಕೆ ಪೌರಕಾರ್ಮಿಕರು, ಆದಿವಾಸಿ ಮಹಿಳೆಯರಿಗೆ ಆಹ್ವಾನ – ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

New Delhi: ರವಿವಾರ ಸಂಜೆ 7:15 ಕ್ಕೆ ನರೇಂದ್ರ ಮೋದಿ (Narendra Modi) ಯವರು ಸತತವಾಗಿ 3ನೇ ಅವಧಿಗೆ ಪ್ರಧಾನಿಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಕಾರ್ಯಕರ್ಮಕ್ಕೆ ಪೌರ ಕಾರ್ಮಿಕರು, ಆದಿವಾಸಿ ಮಹಿಳೆಯರು ಸೇರಿದಂತೆ ಅನೇಕ ವಿದೇಶಿ ಗಣ್ಯರಿಗೂ ಆಹ್ವಾನ ನೀಡಲಾಗಿದೆ.

ರಾಷ್ಟ್ರಪತಿ ಭವನದ ಮುಂದೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 9 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಮೂಲಗಳ ಪ್ರಕಾರ, ನೂತನ ಸಂಸತ್ ಭವನ ನಿರ್ಮಿಸಿದ ಕಾರ್ಮಿಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತೃತೀಯ ಲಿಂಗಿಗಳು, ಗಣಿ ಕಾರ್ಮಿಕರು, ವಂದೇ ಭಾರತ್ (Vande Bharat) ಹಾಗೂ ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಮುಖ್ಯ ಪಾತ್ರವಹಿಸಿದವರು, ಧಾರ್ಮಿಕ ಗುರುಗಳು, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕ್ರತರು, ಆದಿವಾಸಿ ಮಹಿಳೆಯರು, ಹಿರಿಯ ನಾಯಕೀಯ ನೇತಾರರಿಗೆ ಆಹ್ವಾನ ನೀಡಲಾಗಿದೆ.

ಯಾವ್ಯಾವ ದೇಶಗಳ ಗಣ್ಯರಿಗೆ ಆಹ್ವಾನ : ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (Ranil Wickramasinghe), ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ಸೀಷೆಲ್ಸ್ ಅಧ್ಯಕ್ಷ ವಾವೆಲ್ ರಾಮ್ಕಾಲಾವನ್ (Wavell Ramkalavan), ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿದೆ.

ಭಾರೀ ಭದ್ರತೆ : ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಸುತ್ತ ಭಾರೀ ಭದ್ರತೆ ಕಲ್ಪಿಸಲಾಗಿದೆ. 5 ಹಂತದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ದೆಹಲಿ ಪೊಲೀಸರು (Delhi Police), ಕೇಂದ್ರ ಅರೆಸೈನಿಕ ಪಡೆಗಳು, ಎನ್ಎಸ್ಜಿ ಕಮಾಂಡೋಗಳು (NST Commando), ಸ್ನೈಪರ್ಗಳನ್ನು ನಿಯೋಜಿಸಲಾಗಿದೆ. ವಿದೇಶಿ ಗಣ್ಯರಿಗೆ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್ಗಳಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

Exit mobile version