ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission) 16 ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಪೈಕಿ ಸಾರಿಗೆ ಇಲಾಖೆಯ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸ್ವೀಕಾರ ಆರಂಭವಾಗಿದೆ. ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು (ಗ್ರೂಪ್ ಸಿ) – 76 ಹುದ್ದೆಗಳಿಗೆ ಏಪ್ರಿಲ್ (April) 22, 2024 ರಿಂದ ಮೇ 21, 2024 ರವರೆಗೆ ಅರ್ಜಿ ಸ್ವೀಕಾರ ನಡೆಯಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಸಂಸ್ಥೆ : ಸಾರಿಗೆ ಇಲಾಖೆ
ಹುದ್ದೆ ಹೆಸರು : ಮೋಟಾರು ವಾಹನ ನಿರೀಕ್ಷಕರು
ಹುದ್ದೆಗಳ ಸಂಖ್ಯೆ : 76 (70RPC+6HK)
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ :
1ನೇ ಹಂತ : ಪ್ರೊಫೈಲ್ ಕ್ರಿಯೇಟ್
2ನೇ ಹಂತ : ಅಪ್ಲಿಕೇಶನ್ ಸಬ್ಮಿಷನ್ (Application Submission)
3ನೇ ಹಂತ : ಶುಲ್ಕ ಪಾವತಿ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : ಮೇ 21, 2024
ಅರ್ಜಿ ಸಲ್ಲಿಕೆ ಹೇಗೆ..?
ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ http://www.kpsc.kar.nic.in/ ಗೆ ಭೇಟಿ ನೀಡಿ.
Apply Online for Various Notifications ಮೇಲೆ ಕ್ಲಿಕ್ ಮಾಡಿ.
MVI RPC, HK Posts ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಯೂಸರ್ ನೇಮ್, ಪಾಸ್ವರ್ಡ್ ನೀಡಿ ‘Login’ ಮೇಲೆ ಕ್ಲಿಕ್ ಮಾಡಿ. ನಂತರ ಅರ್ಜಿ ಸಲ್ಲಿಸಿ.
ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವವರು ‘New Registration’ ಮೇಲೆ ಕ್ಲಿಕ್ ಮಾಡಿ.