ದೇಶದೊಳಗೆ ನುಗ್ಗುತ್ತಿರುವ ಮ್ಯಾನ್ಮಾರ್ ಸೈನಿಕರು: ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಮಿಜೋರಾಂ ಮನವಿ

Guwahati: ಮ್ಯಾನ್ಮಾರ್‌ನಲ್ಲಿ (Myanmar Army Soldiers Fleeing-IND) ಬಂಡುಕೋರ ಪಡೆಗಳು ಹಾಗೂ ಸೇನಾ ಆಡಳಿತದ ನಡುವಿನ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತಕ್ಕೆ

ಮ್ಯಾನ್ಮಾರ್ ಸೇನೆಯ ನೂರಾರು ಸೈನಿಕರು ಓಡಿ ಬರುತ್ತಿದ್ದಾರೆ. ಇದರ ಕುರಿತು ಮಿಜೋರಾಂ (Mizoram) ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಸುಮಾರು 600 ಮ್ಯಾನ್ಮಾರ್ ಸೇನಾ ಯೋಧರು, ಮ್ಯಾನ್ಮಾರ್‌ನಲ್ಲಿ ತೀವ್ರ ಸ್ವರೂಪದ ಸಂಘರ್ಷದ ನಡೆಯುತ್ತಿದ್ದಂತೆ ಭಾರತದ ಗಡಿಯನ್ನು ದಾಟಿ ಒಳಬಂದಿದ್ದಾರೆ. ಪಶ್ಚಿಮ ಮ್ಯಾನ್ಮಾರ್ ರಾಜ್ಯ

ರಖೈನ್‌ನಲ್ಲಿನ ಅವರ ಶಿಬಿರಗಳನ್ನು ಸ್ಥಳೀಯ ಜನಾಂಗೀಯ ಸಶಸ್ತ್ರ ಪಡೆ ಅರಾಕನ್ ಆರ್ಮಿ (ಎಎ) ಸ್ವಾಧೀನಪಡಿಸಿಕೊಂಡ ನಂತರ ಮಿಜೋರಾಂನ ಲಾಂಗ್‌ಟ್ಲಾಯ್ (Longtlay) ಜಿಲ್ಲೆಯಲ್ಲಿ ಆಶ್ರಯ

ಪಡೆದುಕೊಂಡಿದ್ದಾರೆ ಎಂದು (Myanmar Army Soldiers Fleeing-IND) ಸರ್ಕಾರದ ಮೂಲಗಳು ತಿಳಿಸಿವೆ.

ಈ ಸನ್ನಿವೇಶದ ಕುರಿತು ಶಿಲ್ಲಾಂಗ್‌ನಲ್ಲಿ (Shillang) ನಡೆದ ಈಶಾನ್ಯ ಮಂಡಳಿಯ ಸರ್ವಪಕ್ಷ ಸಭೆಯ ವೇಳೆ ಮಿಜೋರಾಂ ಸಿಎಂ ಲಾಲ್ದುಹೊಮಾ ಮತ್ತು ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರ

ನಡುವೆ ತುರ್ತು ಚರ್ಚೆ ನಡೆದಿದೆ. ಈ ಸೈನಿಕರು ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜ್ಯದ ಒಳಗೆ ಆಶ್ರಯ ಪಡೆದುಕೊಂಡಿರುವ ಮಿಜೋರಾಂ ಸೇನಾ ಸಿಬ್ಬಂದಿಯನ್ನು

ಕೂಡಲೇ ಹಿಮ್ಮೆಟ್ಟಿಸುವ ಅಗತ್ಯವಿದೆ ಎಂದು ಮಿಜೋರಾಂ ಸರ್ಕಾರ ಒತ್ತಿ ಹೇಳಿದೆ.

ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಪ್ರಾದೇಶಿಕ ಸ್ಥಿರತೆ ಮೇಲೆ ಅದರ ನಕಾರಾತ್ಮಕ ಪರಿಣಾಮದ ಆತಂಕಕಾರಿ ಪರಿಸ್ಥಿತಿಯ ನಡುವೆ ಈ ಬೆಳವಣಿಗೆ ನಡೆದಿದ್ದು, ಮ್ಯಾನ್ಮಾರ್‌ನ ಜನರು ಆಶ್ರಯಕ್ಕಾಗಿ ನಮ್ಮ

ದೇಶಕ್ಕೆ ಓಡಿ ಬರುತ್ತಿದ್ದಾರೆ. ನಾವು ಅವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಿದ್ದೇವೆ. ಮ್ಯಾನ್ಮಾರ್‌ನ ಸೈನಿಕರು ಒಳ ಬರುತ್ತಲೇ ಇರುವುದರಿಂದ ಆಶ್ರಯ ಕೋರುತ್ತಿದ್ದಾರೆ.

ಸರ್ವಪಕ್ಷ ಸಭೆ ಬಳಿಕ ಮಿಜೋರಾಂ ಸಿಎಂ ಲಾಲ್ದುಹೊಮಾ ಅವರು, ಸುಮಾರು 450 ಸೈನಿಕರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನು ಓದಿ: ಭೀಮಾನದಿ ತೀರದಲ್ಲಿ ನಿಷೇದಾಜ್ಞೆ ಜಾರಿ: ವಿದ್ಯುತ್ ಸಂಪರ್ಕ ಕಡಿತ, ಹೆಸ್ಕಾಂ ವಿರುದ್ಧ ರೈತರ ಆಕ್ರೋಶ

Exit mobile version