ಲೋಕಸಮರ 2024 : ಮೈಸೂರು-ಚಾಮರಾಜನಗರ ಮೇಲೆ ಎಲ್ಲರ ಕಣ್ಣು; ಜೆಡಿಎಸ್ನಿಂದ ಸಾರಾ ಹೆಸರು..!

ಮೈಸೂರು : 2024ರ ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಈಗಿನಿಂದಲೇ ಭರ್ಜರಿ ತಯಾರಿ ಶುರುವಾಗಿದೆ. ಪ್ರತಿ (Mysore Sara name from JDS) ಕ್ಷೇತ್ರದಲ್ಲೂ ರೂಪಿಸಬೇಕಾದ

ತಂತ್ರಗಾರಿಕೆಯ ಕುರಿತು ಮೂರು ಪಕ್ಷಗಳು ತಮ್ಮ ಸ್ಥಳೀಯ ನಾಯಕರೊಂದಿಗೆ ಸಭೆಗಳನ್ನು ನಡೆಸುತ್ತಾ, ಪಕ್ಷವನ್ನು ಬಲಪಡಿಸುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿವೆ. ಈ ಮಧ್ಯೆ ಮೈಸೂರು-ಕೊಡಗು

ಲೋಕಸಭಾ ಕ್ಷೇತ್ರ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳು ಭಾರೀ ಕುತೂಹಲಕ್ಕೆ (Mysore Sara name from JDS) ಕಾರಣವಾಗಿವೆ.

ಬಿಜೆಪಿ ಪಕ್ಷವನ್ನು ಹೊರತುಪಡಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರ ನಡುವೆ ಲೋಕಸಭಾ ಟಿಕೆಟ್ಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಭಾರೀ ಗುದ್ದಾಟ ಶುರುವಾಗಿದೆ. ಕಳೆದ ವಿಧಾನಸಭಾ

ಚುನಾವಣೆಯಲ್ಲಿ ಟಿಕೆಟ್ ವಂಚಿತರಾದವರು ಒಂದೆಡೆಯಾದರೆ, ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವವರು ಒಂದೆಡೆಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಟಿಕೆಟ್ ಕಲಹ ಜೋರಾಗಿದೆ. ಹೀಗಾಗಿಯೇ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಅನೇಕರು ಬಹಿರಂಗವಾಗಿಯೇ ವ್ಯಕ್ತಪಡಿಸುವ ಮೂಲಕ ಟಿಕೆಟ್ಗೆ ಟವೆಲ್ ಹಾಕುತ್ತಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಹಾಗೂ ಡಿಕೆಶಿ ಬೆಂಬಲಿಗ ವಾಸು, ಸ್ಥಳೀಯ ಕಾಂಗ್ರೆಸ್ ನಾಯಕ

ಸೂರಜ್ ಹೆಗ್ಡೆ ಹೆಸರು ಕೇಳಿ ಬರುತ್ತಿವೆ. ಈ ಮಧ್ಯೆ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದಲೇ ಸ್ಪರ್ದೆ ಮಾಡಿಲಿದ್ದು, ಮೈಸೂರು ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕಾಂಗ್ರೆಸ್

ವಲಯದಲ್ಲಿವೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್

ಗೆಲ್ಲಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ಇದೆಲ್ಲದರ ಮಧ್ಯೆ ಒಕ್ಕಲಿಗ ಅಸ್ತ್ರ, ಅಭಿವೃದ್ದಿ ಕೆಲಸಗಳು, ಮೋದಿ ಮೋನಿಯಾವನ್ನೇ ಅಸ್ತ್ರವನ್ನಾಗಿಸಿಕೊಂಡು ಹ್ಯಾಟ್ರಿಕ್ ಗೆಲುವು ಸಾಧಿಸಲು ಹಾಲಿ ಸಂಸದ

ಪ್ರತಾಪ್ ತಂತ್ರ ರೂಪಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬಿಜೆಪಿ ಹೊಂದಿರುವ ಪ್ರಾಬಲ್ಯ ಅವರ ಕೈ ಹಿಡಿಯುವ ಸಾಧ್ಯತೆ ಇದೆ.

ಇನ್ನು, ಎಸ್ಸಿ ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೇಲೆ ಸಚಿವ ಎಚ್ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಕಣ್ಣಿಟ್ಟಿದ್ದಾರೆ. ಈಗಾಗಲೇ ಚಾಮರಾಜನಗರದಲ್ಲಿ

ಸುನೀಲ್ ಬೋಸ್ ಓಡಾಟ ಶುರು ಮಾಡಿದ್ದಾರೆ ಬಿಜೆಪಿಯಿಂದ ಕೆ. ಶಿವರಾಮ, ಎನ್ ಮಹೇಶ್, ಹರ್ಷವರ್ಧನ್ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಆದರೆ ಬಿಜೆಪಿ ಈ ಕ್ಷೇತ್ರದಿಂದ ಅಚ್ಚರಿ

ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ

ಜೆಡಿಎಸ್ನಿಂದ ಸಾರಾ ಮಹೇಶ್..?
ಮೈಸೂರು ಅಥವಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಾರಾ ಮಹೇಶ್ ಅವರನ್ನು ಸ್ಪರ್ಧಿಸುವಂತೆ ಮಾಡಲು ಎಚ್ಡಿ ಕುಮಾರಸ್ವಾಮಿ ಹಾಗೂ ಎಚ್ಡಿ ರೇವಣ್ಣ ಪ್ರಯತ್ನಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕೆಆರ್ ನಗರದಲ್ಲಿ ಸೋಲು ಕಂಡಿರುವ ಸಾರಾ ಮಹೇಶ್ ಅವರನ್ನು ಮೈಸೂರು ಅಥವಾ ಮಂಡ್ಯದಿಂದ ಸ್ಪರ್ಧಿಸುವಂತೆ ದಳಪತಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ಸಾರಾ

ಮಹೇಶ್ ಈ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

Exit mobile version