ಮೈಸೂರಿನಿಂದ ಅಯೋಧ್ಯೆಗೆ ತೆರಳಲು 15 ದಿನಕ್ಕೊಮ್ಮೆ ರೈಲು: ಪ್ರತಾಪ್‌ ಸಿಂಹ

Mysore: ಮೈಸೂರಿನಿಂದ (Mysore to Ayodhya train) ಅಯೋಧ್ಯಯಲ್ಲಿರುವ ರಾಮ ಮಂದಿರಕ್ಕೆ ತೆರಳುವವರಿಗೆ 15 ದಿನಕ್ಕೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ

ಪ್ರತಾಪ್‌ ಸಿಂಹ @Pratapsimha ತಿಳಿಸಿದ್ದಾರೆ.

ಮೈಸೂರಿನಿಂದ ಅಯೋಧ್ಯೆಗೆ (Ayodhya) ಮೊದಲ ವಿಶೇಷ ರೈಲು ಫೆಬ್ರವರಿ 4ರಂದು ಮಧ್ಯಾಹ್ನ 12.15ಕ್ಕೆ ಹೊರಡಲಿದ್ದು, ನಂತರ 15 ದಿನಕ್ಕೊಮ್ಮೆ ನಿರಂತರವಾಗಿ ರೈಲು ಸಂಚಾರ ಮಾಡಲಿದೆ.

ಸದ್ಯದಲ್ಲಿಯೇ ಬುಕಿಂಗ್‌ ಓಪನ್‌ (Booking Open) ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಯೋಧ್ಯೆಗೆ ಹೋಗುವವರಿಗೆ ರೈಲಿನಲ್ಲಿ ಊಟ, ತಿಂಡಿ ವ್ಯವಸ್ಥೆ, ಅಯೋಧ್ಯೆಯಲ್ಲಿ

ಉಳಿದುಕೊಳ್ಳಲು ವಸತಿ ವ್ಯವಸ್ಥೆ (Mysore to Ayodhya train) ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇಂಡಿಯಾ ಗೇಟ್‌ (India Gate) ಬಳಿ ಸುಭಾಷ್‌ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಮಾಡಿಕೊಡುವಾಗ ನಾನೇ ಪ್ರಧಾನ ಮಂತ್ರಿಗಳಿಗೆ ಅರುಣ್‌ ಯೋಗಿರಾಜ್‌ (Arun Yogiraj) ಅವರನ್ನು

ಪರಿಚಯಿಸಿದ್ದೆ. ಮತ್ತು ಅಯೋಧ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿಯನ್ನು ಕೆತ್ತಿದವರೂ ಮೈಸೂರಿನವರೇ ರಾಮನ ಮೂರ್ತಿಗೆ ಬಳಕೆ ಮಾಡಿದ ಕಲ್ಲು ಮೈಸೂರಿನ ಎಚ್‌.ಡಿ. ಕೋಟೆ

ತಾಲೂಕಿನ ಹಾರೋಹಳ್ಳಿಯದು.ಅದಾದ ನಂತರ ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ ಆ ಮೂಲಕ ಮೈಸೂರು ಮತ್ತು ಅಯೋಧ್ಯೆ ನಡುವೆ ಶಾಶ್ವತವಾದ ಸಂಬಂಧ ಏರ್ಪಟ್ಟಿದೆ

ಎಂದು ವಿವರಿಸಿದರು.

ಲಕ್ಷಾಂತರ ಹಿಂದುಗಳು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ 500 ವರ್ಷಗಳಿಗಿಂತ ಹೆಚ್ಚು ಕಾಲ ಸುಮಾರು ಜನರು ಪ್ರಾಣ ನೀಡಿದ್ದು, ಗೋಲಿಬಾರ್‌ಗೆ (Golibar)

ಒಳಗಾಗಿದ್ದಾರೆ. ಕೊನೆಗೆ ಕೋರ್ಟ್‌ ಮುಖಾಂತರ ನ್ಯಾಯಯುತವಾಗಿ ಜಾಗವನ್ನು ಪಡೆದುಕೊಂಡು ಭವ್ಯವಾದ ದೇವಾಲಯ ನಿರ್ಮಾಣವಾಗಿದೆ. ಇಂದು ಪ್ರತಿಷ್ಠಾಪನೆ ಆದ್ದರಿಂದ ದೇಶದಾದ್ಯಂತ

ಹಬ್ಬದ ಸನ್ನಿವೇಶ ಸೃಷ್ಟಿಯಾಗಿದೆ,” ಎಂದರು.

ಜನ ಸಾಮಾನ್ಯರ ಮಾತಿಗೆ ಬೆಲೆ ನೀಡುವ, ಎಲ್ಲರ ಮಾತಿಗೂ ಮನ್ನಣೆ ನೀಡುವ ವ್ಯವಸ್ಥೆಯನ್ನು ಆದರ್ಶವಾಗಿ ಇಟ್ಟುಕೊಂಡಿರುವ ಆಡಳಿತ ವ್ಯವಸ್ಥೆ ಬರಬೇಕು ಎಂದು ಮಹಾತ್ಮ ಗಾಂಧಿ ಬಯಸಿದ್ದರು.

ಈ ದೇಶ ರಾಮರಾಜ್ಯ ಆಗಬೇಕೆಂದು ಮಹಾತ್ಮಾ ಗಾಂಧಿಜಿಯವರು (Mahatma Gandhi) ಕನಸು ಕಂಡಿದ್ದರು, ರಾಮ ಒಬ್ಬ ಅಗಸನ ಮಾತಿಗೂ ಅಂಜಿದ್ದಾನೆ. ಕೊಟ್ಟ ಮಾತಿನಂತೆ ವನವಾಸ

ಅನುಭವಿಸಿದ್ದಾನೆ. ಎಲ್ಲರ ನೋವುಗಳನ್ನು ದೂರಗೊಳಿಸುವ ಮಾತೃ ಹೃದಯಿ ಸ್ಪಂದನೆಯ ನ್ಯಾಯ ಸಮ್ಮತ ವ್ಯವಸ್ಥೆ ಕಲ್ಪಿಸುವ ಆಡಳಿತಕ್ಕೆ ರಾಮರಾಜ್ಯ ಎನ್ನಲಾಗುತ್ತದೆ ಎಂದು ಅವರು ಸ್ಮರಿಸಿದ್ದಾರೆ.

Exit mobile version